ಗದಗ:
ಮೂರನೇ ಭಾರಿ ಮೋದಿ ಜಯಭೇರಿ ಎಂಬ ಘೋಷಣೆಯೊಂದಿಗೆ ನಮೋ ಬ್ರೀಗೇಡ್ ಮುಖ್ಯಸ್ಥ ಚಕ್ರವತಿರ್ ಸೂಲಿಬೇಲಿ ನೇತೃತ್ವದಲ್ಲಿ ಬುಧವಾರ ಜಿಲ್ಲೆಯಾದ್ಯಂತ ಬೈಕ್ ರ್ಯಾಲಿ ಯಶಸ್ವಿಯಾಗಿ ಜರುಗಿತು.
ಜನ ಗಣ ಮನ ಬೆಸೆಯೋಣ ಎಂಬ ಧ್ಯೆಯ ವಾಕ್ಯದೊಂದಿಗೆ ನಮೋ ಬ್ರಿಗೆಡ್ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡರು. ಪ್ರಧಾನಿ ನರೇಂದ್ರ ಮೋದಿ, ಬಿ.ಆರ್. ಅಂಬೇಡ್ಕರ, ಬಸವೇಶ್ವರರು, ಸುತ್ತೂರು ಮಠದ ಸ್ವಾಮಿಜೀಗಳ ಭಾವಚಿತ್ರವಿರುವ ವಾಹನವು ಜಾಥಾದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಗದಗ ಜಿಲ್ಲೆಯ ಲಕ್ಕುಂಡಿಯಿಂದ ಬೈಕ್ ರ್ಯಾಲಿ ಆರಂಭವಾಗಿ, ಹಾತಲಗೇರಿ ಗ್ರಾಮ, ಬೆಟಗೇರಿ, ಗಾಂಧಿವೃತ್ತ ಸೇರಿದಂತೆ ವಿವಿಧ ಮುಖ್ಯರಸ್ತೆಗಳಲ್ಲಿ ಸಂಚರಿಸಿ ಮುಳಗುಂದ ನಾಕಾ ಮೂಲಕ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಲುಪಲಿತು. ಬೈಕ್ ರ್ಯಾಲಿ ವಿವಿಧ ಸ್ಥಳಗಳಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಕಾರ್ಯಕರ್ತರು ಸೂಲಿಬೇಲಿ ಚಕ್ರವತಿರ್ ಅವರನ್ನು ಹೂಮಾಲೆ ಹಾಕಿ ಸ್ವಾಗತಿಸುತ್ತಿದ್ದರು.
ಶರಣು ಅಂಗಡಿ, ವಿಜಯಕುಮಾರ್ ನಂದಿಕೋಲಮಠ, ಸಂಜಯ್ ರೆಡ್ಡಿ, ಕಿಶನ್ ಮೆರವಾಡೆ, ಮುತ್ತಣ್ಣ ನವಲಗುಂದ ಇತರರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.