ಮೂಡಿಗೆರೆ: ನಾವು ಮಾಡಿದ ಸೇವೆ ಜನ ಮೆಚ್ಚುವ ರೀತಿಯಲ್ಲಿರಬೇಕು. ಮೂಡಿಗೆರೆ ತಾಲೂಕು ನನ್ನ ಜೀವನದಲ್ಲಿ ಅತ್ಯಂತ ಸುಂದರ ಕನಸನ್ನು ನನಸಾಗಿಸಿದ ಊರು. ಇಂಥ ವಾತಾವರಣದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದು ಜೆಎಂಎಫ್‌ಸಿ ಹಿರಿಯ ನ್ಯಾಯಾಧೀಶ ಜಯಪ್ರಕಾಶ್ ಬಣ್ಣಿಸಿದರು.
ವರ್ಗಾವಣೆಯಾದ ಹಿನ್ನೆಲೆಯಲ್ಲಿ ವಕೀಲರ ಸಂಘದಿಂದ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ನ್ಯಾಯಾಂಗ ಸೇವೆಯಲ್ಲಿ ತೃಪ್ತಿ ತಂದಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಎಚ್.ಕೆ.ದೇವರಾಜ್ ಮಾತನಾಡಿ, ನ್ಯಾಯಾಲಯ ಮತ್ತು ವಕೀಲರ ನಡುವೆ ಗೌರವ, ಸಹಕಾರ ಮತ್ತು ವಿಶ್ವಾಸದ ಸಂಬಂಧ ಮುಂದುವರೆಯಲಿ ಎಂದು ತಿಳಿಸಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ವಿಶ್ವನಾಥ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಕೆ.ಕೆ.ಸುರಕ್ಷಾ, ಸಹಾಯಕ ಸರ್ಕಾರಿ ಅಭಿಯೊಜಕರಾದ ರೂಪಾ, ರೇಣುಕಾ, ಸಂಘದ ಕಾರ್ಯದರ್ಶಿ ಎಂ.ಎಂ.ರಾಘವೇಂದ್ರ, ವಕೀಲರಾದ ಕೆ.ಎಂ.ಪ್ರಶಾಂತ್, ಬಿ.ಜಗದೀಶ್, ಎಂ.ವಿ.ಜಯರಾಜ್, ಡಿ.ಕೆ.ಪ್ರಸನ್ನಕುಮಾರ್, ಬಿ.ಟಿ.ನಟರಾಜ್, ಎಚ್.ಕೆ.ರಘು, ಬಿ.ಎ.ಸುರೇಶ್, ಹರ್ಷನಾಥ್, ಸುದೀಪ್, ಕೆ.ಸಿ.ಚಂದ್ರಶೇಖರ್, ರಿಯಾ ಇತರರಿದ್ದರು.