ಜಿಲ್ಲೆ

ಜನ ಕಲ್ಯಾಣ ಸಮಾವೇಶ ಯಶಸ್ವಿಯಾಗಿದೆ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ

ಶ್ರವಣಬೆಳಗೊಳ: ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸರ್ಕಾರದ ಮೇಲೆ ವಿರೋಧ ಪಕ್ಷದವರು ಮಾಡುತ್ತಿದ್ದ ಆರೋಪಗಳಿಗೆ ಹಾಸನದಲ್ಲಿ ನಡೆದಂತಹ ಸಮಾವೇಶದ ಮೂಲಕ ಉತ್ತರ ನೀಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಹೇಳಿದರು.

ಶ್ರವಣಬೆಳಗೊಳದಲ್ಲಿ ಶುಕ್ರವಾರ ನಿಷಿಧಿ ಮಂಟಪ ಲೋಕಾರ್ಪಣೆ ಕಾರ್ಯಕ್ರಮದ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರುಮ ಮಾತನಾಡಿದ ಅವರು, ಜನ ಕಲ್ಯಾಣ ಸಮಾವೇಶ ಬಹಳ ಯಶಸ್ವಿಯಾಗಿದೆ. ಜನರಿಗೆ ಯಾವ ವಿಷಯ ಮುಟ್ಟಿಸಬೇಕಾಗಿತ್ತು ಅದನ್ನು ಜನರಿಗೆ ತಲುಪಿಸಿದ್ದೇವೆ. ಅದೇ ರೀತಿ ವಿರೋಧ ಪಕ್ಷದವರಿಗೂ ಕೂಡ ತಕ್ಕ ಉತ್ತರವನ್ನು ನೀಡಿದ್ದೇವೆ ಎಂದರು.

ರಾಜಕೀಯ ಮುಖಂಡರು ಯಾವುದೇ ಪಕ್ಷದವರು ಆಗಿರಲಿ ವೈಯಕ್ತಿಕವಾಗಿ ಯಾರ ಮೇಲೂ ಕೂಡ ಟೀಕೆ ಮಾಡುವುದು ಸರಿಯಲ್ಲ. ಅವರ ಸಿದ್ಧಾಂತ, ತತ್ವ ಅವರ ಅನುಕರಣೆ ಮಾಡುವ ರೀತಿ-ನೀತಿಗಳ ಬಗ್ಗೆ ಯಾರು ಬೇಕಾದರೂ ಟೀಕೆ ಮಾಡಲಿ. ಆದರೆ ವೈಯಕ್ತಿಕ ಟೀಕೆ ಸರಿಯಲ್ಲ ಎಂದರು.

ಬುಡಾ ಪ್ರಕರಣ ಮರೆಮಾಚಲು ಸಮಾವೇಶ ಮಾಡುತ್ತಿದ್ದಾರೆ ಎಂಬ ವಿರೋಧ ಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜಣ್ಣ, ಅದು ಅವರ ಅಭಿಪ್ರಾಯ ಇರಬಹುದು. ಆದರೆ ಸುಳ್ಳನ್ನು ಹೇಳಿದರೆ ಆ ಸುಳ್ಳುಗಳು ಸರಿಯಲ್ಲ. ಸತ್ಯಾಂಶ ಏನು ಎಂಬುದನ್ನು ಮನವರಿಕೆ ಮಾಡಲು ಸಮಾವೇಶ ಮಾಡಲಾಗಿದೆ ಎಂದರು.