ಆಳಂದ: ಎರಡು ಗುಂಪುಗಳ ಮಧ್ಯೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಮುಂದಾಗಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ಘಟನೆ ಪಟ್ಟಣದ ಚಿಲ್ಲಾಳ ಪೆಟ್ರೋಲ್ ಪಂಪ್ ಬಳಿ ಭಾನುವಾರ ನಡೆದಿದೆ. ಎಸ್‌ಬಿ ಪೊಲೀಸ್ ಪೇದೆ ಗಣಪತರಾವ ಹಲ್ಲೆಗೊಳಗಾದವರು. ಹಲ್ಲೆ ಮಾಡಿದ ನಿಖಿಲ್ ಎಸ್., ಕರಣ, ಪ್ರಮೋದ, ದೀಪಕ, ಅಮುಲ, ನಿಖಿಲ ಜಿ., ಅರ್ಜುನ, ಕುಮಾರ ವಿರುದ್ಧ ಪ್ರಕರಣ ದಾಖಲಾಗಿದೆ.
ಚಿಲ್ಲಾಳ ಪೆಟ್ರೋಲ್ ಪಂಪ್ ಬಳಿ ಬುಲೆರೋ ಟಂಟA ಮತ್ತು ಆಟೋ ಮಧ್ಯೆ ಅಪಘಾತ ಸಂಭವಿಸಿದ್ದು, ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ್ದ ಪೊಲೀಸರು ಪ್ರಕರಣ ಬಗೆಹರಿಸಿ, ಕಳುಹಿಸಲು ಮುಂದಾಗಿದ್ದಾರೆ. ಈ ವೇಳೆ ತಾಲೂಕಿನ ನಿಪ್ಪಾಣಿ ತಾಂಡಾದ ಯುವಕರು ಟಂಟA ಆಟೋದವರ ಜತೆ ಗಲಾಟೆ ಆರಂಭಿಸಿದ್ದಾರೆ. ಮಧ್ಯ ಪ್ರವೇಶಿಸಿದ ಪೇದೆ ಗಣಪತರಾವ್ ಜಗಳ ಬಿಡಿಸಲು ಮುಂದಾಗಿದ್ದಾರೆ. ಆಗ ನಿಖಿಲ, ಕರ್ಣ ಸೇರಿ ಎಂಟು ಜನರು ಪೇದೆ ಮೇಲೆ ಹಲ್ಲೆ ಮಾಡಿ, ಪರಾರಿಯಾಗಿದ್ದಾರೆ. ಇಬ್ಬರು ಯುವಕರು ಪೊಲೀಸರ ಕೈಗೆ ಸಿಕ್ಕಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.