ಜಿಲ್ಲೆ

ಜಗತ್ತಿನ ಸೃಷ್ಟಿಕರ್ತ ಶ್ರೀ ವಿಶ್ವಕರ್ಮ ಮಹರ್ಷಿ- ಮರತೂರಕರ

ಕೃಷ್ಣ ಕುಲಕರ್ಣಿ

ಕಮಲಾಪುರ: ಶ್ರೀ ವಿಶ್ವಕರ್ಮ ಮಹರ್ಷಿ ಜಗತ್ತಿನ ಸೃಷ್ಟಿಕರ್ತನಾಗಿದ್ದು, ಪಂಚಭೂತಗಳು ಸ್ಥಗಿತಗೊಂಡಾಗ ಉದ್ಭವವಾದರು ಎಂಬುದು ಪುರಾಣಗಳಿಂದ ತಿಳಿದುಬರುತ್ತದೆ ಎಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ ಹೇಳಿದರು.

ಮಹಾಗಾಂವ್ ಕ್ರಾಸ್‌ನಲ್ಲಿ ವಿಶ್ವಕರ್ಮ ಸಮಾಜ ಗುರುವಾರ ಏರ್ಪಡಿಸಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜ ಕಾಯಕವನ್ನೇ ನಂಬಿ ಜೀವನ ಸಾಗಿಸುತ್ತಿದೆ. ಸಮಾಜದ ಅಭಿವೃದ್ಧಿಗೆ ಸರ್ಕಾರಗಳು ಗಮನಹರಿಸಬೇಕು ಎಂದು ಕೋರಿದರು.

ಶ್ರೀ ಮೌನೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಜಶೇಖರ ಪೋದ್ದಾರ, ಗ್ರಾಪಂ ಅಧ್ಯಕ್ಷೆ ಮನೀಷಾ ಹರಸೂರಕರ್, ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಪ್ರಮುಖರಾದ ಮಾರುತಿ ಕಮ್ಮಾರ, ನರೇಶ ಹರಸೂರಕರ, ಸಂತೋಷ ಪಂಚಾಳ, ಶ್ರದ್ಧಾನಂದ ಪೋದ್ದಾರ, ಭಾಗ್ಯವಂತ ಕೌನಳ್ಳಿ, ಪ್ರಭಾಕರ ತಲಾಟಿ, ಶಂಕರ ಪಂಚಾಳ ಇತರರಿದ್ದರು. ಸುವರ್ಣಾ ಪೋದ್ದಾರ ಪ್ರಾರ್ಥಿಸಿದರು. ರವಿಚಂದ್ರ ಸ್ವಾಗತಿಸಿದರು. ಸುಭಾಷ ಪಂಚಾಳ ನಿರೂಪಣೆ ಮಾಡಿದರು.