ಶ್ರೀಕೃಷ್ಣ ಜನ್ಮ ದಿನಾಚರಣೆ ಆಯೋಜನೆಯಲ್ಲಿ ಅವ್ಯವಸ್ಥೆಯಾಗಿದೆ ಎಂದು ಆರೋಪಿಸಿ ಯಾದವ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು. ಯಾದವಮೂರ್ತಿ, ಜಿ.ಮೋಹನ್, ಸುಂದರ್, ಮಂಜುನಾಥ್, ದುರ್ಗಪ್ಪ, ಮಲ್ಲೇಶ್, ಪರಶುರಾಮ್ ಇತರರಿದ್ದರು. 
ಜಿಲ್ಲೆ

ಜಗತ್ತಿನ ಅಪೂರ್ವ ಸಂಘಟಕ ಶ್ರೀಕೃಷ್ಣ

ಶಿಕಾರಿಪುರ: ಶ್ರೀಕೃಷ್ಣ ಎಂದರೆ ಜಗತ್ತು ಕಂಡಂತಹ ಅಪೂರ್ವ ಸಂಘಟಕ. ಚತುರಮತಿ, ಮಾನವ ರೂಪದ ದೈವ ಎಂದು ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್ ಹೇಳಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಯಾದವ ಸಮಾಜದಿಂದ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮರಕ್ಷಣೆಯಲ್ಲಿ ಶ್ರೀಕೃಷ್ಣ ತನ್ನದೇ ಆದಂತಹ ವಿಶಿಷ್ಟವಾದ ಪಾತ್ರ ನಿರ್ವಹಿಸಿದ. ಕೃಷ್ಣ ದುಷ್ಟ ನಿಗ್ರಹ ಮತ್ತು ಶಿಷ್ಟ ರಕ್ಷಣೆಗಾಗಿ ಜನ್ಮ ತಾಳಿದ ಮಹಾವಿಷ್ಣು ಎಂದರು. ಪ್ರಭಾರ ತಹಸೀಲ್ದಾರ್ ಮಂಜುಳಾ, ಯಾದವ ಸಮಾಜದ ತಾಲೂಕು ಅಧ್ಯಕ್ಷ ಜಿ.ಮೋಹನ್, ಸುಂದರ್, ವಕೀಲ ಯಾದವ ಮೂರ್ತಿ, ಮಂಜುನಾಥ್, ದುರ್ಗಪ್ಪ, ಮಲ್ಲೇಶ್, ಪರಶುರಾಮ್, ಎನ್.ಬಸವರಾಜ್, ಸೋಮಪ್ಪ ಇತರರಿದ್ದರು.

ಯಾದವ ಸಮಾಜದಿಂದ ಪ್ರತಿಭಟನೆ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಸಮಾಜದವರ ಮಾತನ್ನು ಕಡೆಗಣಿಸಲಾಗಿದೆ. ಸಮಾಜದವರಿಗೆ ಉಪಹಾರ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿ ಯಾದವ ಸಮಾಜದಿಂದ ತಾಲೂಕು ಪಂಚಾಯಿತಿ ಬಳಿ ಪ್ರತಿಭಟನೆ ನಡೆಸಿದರು. ಸಮಾಜದ ಮುಖಂಡ ಯಾದವ ಮೂರ್ತಿ ಮಾತನಾಡಿ, ಬೆಳಗ್ಗೆ 11ಕ್ಕೆ ಆರಂಭವಾದ ಕಾರ್ಯಕ್ರಮ ಮಧ್ಯಾಹ್ನ 2ಕ್ಕೆ ಮುಗಿದಿದೆ. ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ಸಮಾಜದ ಬಾಂಧವರಿಗೆ ಉಪಹಾರದ ವ್ಯವಸ್ಥೆ ಒದಗಿಸದೆ ನಿರ್ಲಕ್ಷ್ಯವಹಿಸಲಾಗಿದೆ ಎಂದು ಆರೋಪಿಸಿದರು. ಪೂರ್ವಬಾವಿ ಸಭೆಯಲ್ಲಿ ಸುಮಾರು 250 ಜನರಿಗೆ ಊಟದ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಈಗ ಊಟದ ವ್ಯವಸ್ಥೆ ಮಾಡಿಲ್ಲ. ಸರ್ಕಾರದಿಂದ ಹಣ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಮೊದಲೇ ಹೇಳಿದ್ದರೆ ನಮ್ಮ ಸಮಾಜದಿಂದ ಬಂದಂತವರಿಗೆ ನಾವೇ ಉಪಹಾರ ಮಾಡಿಸುತ್ತಿದ್ದೆವು. ಸಣ್ಣ ಸಮಾಜವೆಂದು ನಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದರು.