ಬಾಗಲಕೋಟೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆದಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ. 
ಜಿಲ್ಲೆ

ಜಗತ್ತಿಗೆ ಸಮನ್ವಯದ ವಿಶ್ವ ಬಂಧುತ್ವ ಸಾರಿದವರು ರೇಣುಕಾಚಾರ್ಯ

ಬಾಗಲಕೋಟೆ: ಎಲ್ಲರಲ್ಲಿಯೂ ಸಮಾನತೆಯಿಂದ ಕಾಣುವ ಸಮನ್ವಯ ತತ್ವದ ಮೂಲಕ ಜಗತ್ತಿಗೆ ವಿಶ್ವ ಬಂಧುತ್ವವವನ್ನು ಸಾರಿದವರು ಆದಿ ಜಗದ್ಗುರು ರೇಣುಕಾಚಾರ್ಯರು ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಬೀಳೂರು ಅಜ್ಜನ ದೇವಸ್ಥಾನದ ಆವರಣದಲ್ಲಿ ಬುಧವಾರ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ, ತಾಲೂಕಾ ಜಂಗಮರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಕ್ಕನ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಧರ್ಮ ಸಂಸ್ಥಾಪಕರಾದ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ತ ಭಾವಚಿತ್ರದ ಮೇರವಣಿಗೆಯಲ್ಲಿ ಭಾಗವಹಿಸಿ ಮತನಾಡಿದರು.

ಮಾನವ ಗುಣಗಳನ್ನು ದಹಿಸಿ ಆತನನನ್ನು ಮಹಾದೇವನನ್ನಾಗಿಸುವ, ಜೀವಿ ಶಿವನಾಗುವ, ಮಾನವ ಮಹಾದೇವನಾಗುವ, ಅಂಗ ಲಿಂಗವಾಗುವ ಅಧ್ಭುತ ಸಿದ್ದಾಂತವನ್ನು ಜಗತ್ತಿಗೆ ಭೋಽಸಿದವರು. ಜಗದ್ಗುರು ರೇಣುಕಾಚಾರ್ಯ ಅವರು ಸಮಾನತೆಯ ಸಮನ್ವಯ ತತ್ವದ ಮೂಲಕ ಮಾನವ ಕಲ್ಯಾಣಕ್ಕಾಗಿ ವೀರಶೈವ ಧರ್ಮ ನೆಲೆಗೊಳಿಸಿದರು ಎಂದರು.

ಬಿಲ್‌ಕೆರೂರಿನ ಬಿಲ್ವಾಶ್ರಮದ ಪೂಜ್ಯರಾದ ಸಿದ್ದಲಿಂಗಶಿವಾಚಾರ್ಯರು ಮಾತನಾಡಿ, ಸಮಾಜದಲ್ಲಿ ಎಲ್ಲರನ್ನು ಸಮನಾಗಿ ಕಾಣುವ ಈ ವೀರಶೈವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಜನರ ಶಾಂತ ಬದುಕಿಗೆ ರೇಣುಕಾಚಾರ್ಯರ ಚಿಂತನೆಗಳೆ ದಾರಿದೀಪಗಳಾಗಿವೆ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಎನ್. ಪಾಟೀಲ, ತಾಲೂಕಾ ಜಂಗಮರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿರೇಶ ಚೌಕಿಮಠ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೇನ್ನವರ, ರಾಜು ಕೆಂಗಾಪುರ, ಬಾಬಿ ನಿಡಗುಂದಿ, ರಾಮಣ್ಣ ಜುಮನಾಳ, ಚಂದ್ರಶೇಖರ ಶೆಟ್ಟರ, ಬಸವರಾಜ ಹಿರೇಗೌಡರ, ಪ್ರಕಾಶ ರೇವಡಿಗಾರ, ಶರಣಪ್ಪ ಗುಳೆದ, ಸಂಗಣ್ಣ ಕಲಾದಗಿ, ಬಸವರಾಜ ಹಿರೇಮಠ, ಎಂ.ಎನ್.ಪುರಾಣಿಕಮಠ, ಮುರಗಯ್ಯ ನಿಂಬಲಗುAದಿ, ಫ್ರಭಯ್ಯ ಸರಗಣಾಚಾರಿ, ಕುಮಾರ ಹಿರೇಮಠ, ಎಸ್.ಎನ್.ಬೂಸನೂರಮಠ, ಸಂಗಯ್ಯ ಸರಗಣಾಚಾರಿ, ವಿ.ಆರ್.ಹಿರೇಮಠ, ಬಸವರಾಜ ಪರ್ವತಿಮಠ, ಮುತ್ತಣ್ಣ ಬೆಣ್ಣೂರ, ಯಲ್ಲಪ್ಪ ಬೆಂಡಿಗೇರಿ, ಯಲ್ಲಪ್ಪ ನಾರಾಯಣಿ, ಬಸವರಾಜ ಮುಕ್ಕುಪ್ಪಿ ಸೇರಿದಂತೆ ಅನೇಕರ ಭಾಗವಹಿಸಿದ್ದರು.