ಕಂಪ್ಲಿ: ತಾಲೂಕಿನ ಚಿನ್ನಾಪುರದಲ್ಲಿ ಬಲಿಜ, ಕಾಪು, ನಾಯ್ಡು, ಮುನ್ನೂರು ಕಾಪು ತಾಲೂಕು ಸಂಘದಿಂದ ಶುಕ್ರವಾರ ಯೋಗಿ ನಾರೇಯಣ ಯತೀಂದ್ರರ ಜಯಂತ್ಯುತ್ಸವ ನಿಮಿತ್ತ ಯೋಗಿ ನಾರೇಯಣ ಯುತೀಂದ್ರರ ಭಾವಚಿತ್ರ ಮೆರವಣಿಗೆ ನಡೆಯಿತು. ಮೆಟ್ರಿ ಗ್ರಾಮದ ಮಹಾದೇವ ತಾತನ ಮಠದಿಂದ ಮೆರವಣಿಗೆ ಆರಂಭಗೊಂಡು ಚಿನ್ನಾಪುರ ಗ್ರಾಮದಲ್ಲಿ ಸಮಾವೇಶಗೊಂಡಿತು.
ಸಂಘದ ತಾಲೂಕು ಅಧ್ಯಕ್ಷ ಬಿ.ನಾಗಭೂಷಣ ಮಾತನಾಡಿ, ಯೋಗಿ ನಾರೇಯಣ ಯತೀಂದ್ರರ ಕಾಲಜ್ಞಾನ ಜಗತ್ತಿಗೆ ಬೆಳಕಾಗಿದೆ. ಗ್ರಾಮದಲ್ಲಿ ಯೋಗಿ ನಾರೇಯಣ ಯತೀಂದ್ರರ ದೇವಸ್ಥಾನ ನಿರ್ಮಿಸುವ ಉದ್ದೇಶವಿದ್ದು ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು. ಚಿನ್ನಾಪುರ ಗ್ರಾಮ ಘಟಕದ ಅಧ್ಯಕ್ಷ ಕೃಷ್ಣಪ್ಪ, ಗ್ರಾಪಂ ಸದಸ್ಯ ಕುಶಾಲಪ್ಪ, ಪ್ರಮುಖರಾದ ಹಾದಿಮನಿ ಕಾಳಿಂಗವರ್ಧನ, ಸಣ್ಣ ಕೊಂಡಪ್ಪ, ದೊಡ್ಡ ಕೊಂಡಪ್ಪ, ವಿಜಯಕುಮಾರ್, ಸುಧಾಕರ, ಎಸ್.ಪ್ರಕಾಶ ಗ್ರಾಮಸ್ಥರಿದ್ದರು.
ಮಹಿಳಾ ದಿನಾಚರಣೆ: ಕಂಪ್ಲಿಯ ಯೋಗಿ ನಾರೇಯಣ ಯತೀಂದ್ರರ ಭವನದಲ್ಲಿ ಯೋಗಿ ನಾರೇಯಣ ಯತೀಂದ್ರರ ಜಯಂತ್ಯುತ್ಸವ, ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಮಹಿಳಾ ಬಲಿಜ ಸಂಘದ ನಗರ ಅಧ್ಯಕ್ಷೆ ಶಾರದಮ್ಮ ಲೋಕೇಶ ಮಾತನಾಡಿ, ಸಮುದಾಯದವರು ಸಂಘಟಿತರಾಗಿ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು. ಮಹಿಳಾ ದಿನಾಚರಣೆ ನಿಮಿತ್ತ ಸಮಾಜಕ್ಕೆ ಸೇವೆ ಸಲ್ಲಿಸಿದ ಎಸ್.ಸುನಂದಮ್ಮ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ಸಾವಿತ್ರಿ, ಲಕ್ಷ್ಮೀ, ಕೆ.ವಿದ್ಯಾ, ರೂಪಕಲಾ, ತೇಜಸ್ವಿನಿ, ಪಿ.ವೆಂಕೋಬಪ್ಪ, ಇಂಗಳಗಿ ನಾರಾಯಣಪ್ಪ, ಆರ್.ತಿರುಮಲದೇವರಾಯ, ಡಿ.ಶ್ರೀನಿವಾಸ, ಕೆ.ಶಿವಕುಮಾರ, ಕೆ.ಅನಿಲ ಇತರರಿದ್ದರು.