ಜಿಲ್ಲೆ

ಜಕಣಾಚಾರಿ ಸಂಸ್ಮರಣೋತ್ಸವ ಜ.೧ರಂದು

ರಮೇಶ ಮೇಳಕುಂದಾ

ಕಲಬುರಗಿ: ಅಮರಶಿಲ್ಪಿ ಶ್ರೀ ಜಕಣಾಚಾರಿ ಅವರ ಸಂಸ್ಮರಣಾ ದಿನವನ್ನು ಜ.೧ರಂದು ನಗರದಲ್ಲಿ ಅದ್ದೂರಿಯಾಗಿ ಆಚರಣೆಗೆ ನಿರ್ಧರಿಸಲಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಉಸ್ತುವಾರಿ ಅಶೋಕ ಪೋದ್ದಾರ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ವಿಶ್ವಕರ್ಮ ಸಮಾಜದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂಸ್ಮರಣೋತ್ಸವ ನಿಮಿತ್ತ ನಗರದ ಸಂಗತ್ರಸವಾಡಿಯ ಕಾಳಿಕಾದೇವಿ ಮಂದಿರದಲ್ಲಿ ಜ.ರಂದು ಬೆಳಗ್ಗೆ ೬ರಿಂದ ಪ್ರಾತಃಕಾಲ ಶ್ರೀ ವಿಶ್ವಕರ್ಮ ಸುಪ್ರಭಾತ, ವಿಶ್ವಕರ್ಮ ಧ್ವಜಾರೋಹಣ, ಶ್ರೀ ಗಣಪತಿ ಸಹಿತ ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಗುವುದು. ನಂತರ ಮಧ್ಯಾಹ್ನ ೧ಕ್ಕೆ ನಗರದ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ಜಯಂತ್ಯುತ್ಸವ ನಡೆಯಲಿದೆ ಎಂದರು.

ಜಿಲ್ಲೆಯ ಚಿತ್ರಕಲೆ, ನೃತ್ಯ, ವಿಶ್ವಕರ್ಮ ಪಂಚವೃತ್ತಿಗಳ ಕ್ಷೇತ್ರಗಳ ಪ್ರತಿಭಾನ್ವಿತರಿಗೆ, ನಿವೃತ್ತರಿಗೆ, ವಿಶ್ವಕರ್ಮ ಯೋಧರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಉಪನ್ಯಾಸ ನಡೆಯಲಿದೆ ಎಂದು ಹೇಳಿದರು.

ಸಮಾಜದ ಬೇಡಿಕೆಗಳು: ಕಲಬುರಗಿ ವಿಮಾನ ನಿಲ್ದಾಣಕ್ಕೆ ವಿಶ್ವಕರ್ಮ ನಾಮಕರಣ ಮಾಡಬೇಕು, ಗುಲ್ಬರ್ಗ ವಿವಿಯಲ್ಲಿ ಶ್ರೀ ಜಗದ್ಗುರು ತಿಂಥಿಣಿ ಮೌನೇಶ್ವರರ ಅಧ್ಯಯನ ಪೀಠ ಸ್ಥಾಪಿಸಬೇಕು, ಪಂಚಕಸಬುಗಳ ವಸ್ತು ಪ್ರದರ್ಶನಕ್ಕೆ ಶೆಡ್ ನಿರ್ಮಿಸಬೇಕು, ಮರಗೆಲಸದವರ ಅಗ್ನಿ ಅವಘಡಗಳಿಗೆ ಸಿಎಂ ಆಪತ್ಕಾಲಿಕ ನಿಧಿ ಬಜೆಟ್‌ನಲ್ಲಿ ಅಳವಡಿಸಬೇಕು, ಆಭರಣಗಳ ತಯಾರಕರಿಗೆ ಪೊಲೀಸರಿಂದ ಕಿರುಕುಳ ತಪ್ಪಿಸಲು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಬೇಕು, ಡಾ.ಎಸ್.ಎಂ.ಪAಡಿತ ರಂಗಮAದಿರದಿAದ ಪಂಡಿತರ ಪುತ್ಥಳಿ ನಿರ್ಮಿಸಬೇಕು, ನಗರದ ವೀರೇಂದ್ರ ಬಡಾವಣೆಯಲ್ಲಿನ ಉದ್ಯಾನಕ್ಕೆ ಶ್ರೀ ವಿಶ್ವಕರ್ಮ ನಾಮಕರಣ ಮಾಡಬೇಕು, ವಿಶ್ವಕರ್ಮ ನಿಗಮದ ಇದುವರೆಗಿನ ೮೨ ಕೋಟಿ ರೂ. ಮನ್ನಾ ಮಾಡಬೇಕು ಎಂದು ಸಂಸ್ಮರಣೋತ್ಸವದಲ್ಲಿ ಆಗ್ರಹಿಸಲಾಗುವುದು ಎಂದರು.

ಪ್ರಮುಖರಾದ ಲೋಹಿತ್ ಕಲ್ಲೂರ, ರಾಮಚಂದ್ರಪ್ಪ ಬಡಿಗೇರ, ಶಿವಾನಂದ ಕಲ್ಲೂರ, ಕಮಲಾಕರ ಅಣಕಲ್, ವೀರಣ್ಣ ಕಣಮುಸ್, ಮನೋಹರ ವಿಶ್ವಕರ್ಮ ಇತರರಿದ್ದರು.