ಮಾಗಡಿ : ಪಟ್ಟಣದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಪ್ರತಿಮೆ ಸ್ಥಾಪನೆ ಹಾಗೂ ತಿರುಮಲೆಯಲ್ಲಿ ಅರವಂಟಿಗೆಗೆ ನಿವೇಶನ ನೀಡುವಂತೆ ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷ ತಿಪ್ಪಸಂದ್ರ ಪ್ರಕಾಶ್ ಒತ್ತಾಯಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ವಿಶ್ವಕರ್ಮ ಸಮುದಾಯ ಮತ್ತು ತಾಲೂಕು ಆಡಳಿತ ಬುಧವಾರ ಏರ್ಪಡಿಸಿದ್ದ ಅಮರ ಶಿಲ್ಪಿ ಜಕಣಾಚಾರಿ ಸ್ಮರಣೋತ್ಸವ ದಿನಾಚರಣೆ ಪ್ರಯುಕ್ತ ಅಮರ ಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿದರು.
ಭಾರತದ ಸಂಸ್ಕೃತಿ ಉಳಿದಿರುವುದು ವಿಶ್ವಕರ್ಮ ಸಮಾಜದಿಂದ ರೈತರಿಂದ ಯೋಧರವರೆಗೆ ಬೆನ್ನೆಲುಬಾಗಿ ನಿಂತು ಕೆಲಸ ಮಾಡಿಕೊಂಡು ಬಂದಿದ್ದೇವೆ. ವಿಶ್ವಕರ್ಮ ಸಮಾಜಕ್ಕೆ ನೀಡಿದ 13.50 ಕೋಟಿ ರೂ. ಅನುದಾನದಿಂದ ಎಲ್ಲರಿಗೂ ಅನುಕೂಲವಾಗಿದೆ. ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಇಂದಿಗೂ ಕೆಲವರಿಗೆ ಮಾಹಿತಿ ಇಲ್ಲ. ಇದರಿಂದಾಗಿ ಸರ್ಕಾರದ ಯೋಜನೆಯಿಂದ ವಂಚಿತರಾಗಬೇಕಾಗಿದೆ. ಈ ಸಂಬಂಧ ಸರ್ಕಾರದ ಯೊಜನೆಗಳ ಬಗ್ಗೆ ಸರ್ಕಾರ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಅಮರ ಶಿಲ್ಪಿ ಜಕಣಚಾರಿ ವಿಶ್ವಕರ್ಮಸಮಾಜದ ಸ್ವತಲ್ಲ, ದೇಶದ ಸ್ವತ್ತು ಎಲ್ಲ ಜನಾಂಗದ ಸ್ವತ್ತು, ಅಮರ ಶಿಲ್ಪಿ ಜಕಣಾಚಾರಿ ಸ್ಮರಣೋತ್ಸವ ದಿನವನ್ನು ಸರ್ಕಾರ ಕಾರ್ಯಕ್ರಮ ಎಂದು ಘೋಷಿಸಿದೆ. ಅದರಂತೆ ಅಮರ ಶಿಲ್ಪಿ ಜಕಣಾಚಾರಿ ಸ್ಮರಣೋತ್ಸವ ದಿನವನ್ನು ಪ್ರತಿ ವರ್ಷ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಆದರೆ, ತಾಲೂಕು ಆಡಳಿತ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲು ನಿರ್ಲಕ್ಷ್ಯಿಸಿದೆ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗಿದೆ. ಬೇಲೂರು, ಹಳೇಬೀಡಿನ ದೇವಾಲಯದ ಆವರಣದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಪ್ರತಿಮೆ ಇಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಶರತ್ ಕುಮಾರ್, ಉಪತಹಸೀಲ್ದಾರ್ ಪ್ರಭಾಕರ್, ಶಿರಸ್ತೆದಾರ್ ರಶ್ಮೀ, ವಿಶ್ವಕರ್ಮ ಸಮುದಾಯದ ಗೌರವಾಧ್ಯಕ್ಷ ಎಂ.ಜಿ.ಮಂಜುನಾಥ್ ಅಚಾರ್, ಕಾಳಿಕಾಂಬ ದೇವಾಲಯ ಪ್ರಧಾನ ಅರ್ಚಕ ಲಕ್ಷ್ಮಿನರಸಿಂಹಚಾರ್, ಧನಂಜಯ, ತೇಜಮೂರ್ತಿ, ದೊಣಕುಪ್ಪೆ ಎಚ್.ಎಸ್.ಮೂರ್ತಿ, ಕಾರ್ಯದರ್ಶಿ ಮಲ್ಲೇಶ್, ಉಪಾಧ್ಯಕ್ಷ ನಾಗೇಂದ್ರ, ಕುದೂರು ಪ್ರಕಾಶ್, ಮೂರ್ತಿ, ಮರೂರು ಮೂರ್ತಿ, ದಯಾನಂದ್, ಶಶಿಕುಮಾರ್, ಕುದೂರು ಲೋಕೇಶ್ , ಸೋಮೇಶ್ವರ ಕಾಲನಿ ಮಂಜುನಾಥ್, ಪಣಕನಕಲ್ಲು ಲೋಕೇಶ್, ಸುರೇಶ್ ಇತರರು ಇದ್ದರು.
ತಾಲೂಕು ಆಡಳಿತ ಜಾಗ ನೀಡಲಿ : ಪಟ್ಟಣದಲ್ಲಿ ಅಮರಶಿಲ್ಪಿ ಜಕಣಾಚಾರಿ ದೇವಾಲಯ ನಿರ್ಮಾಣಕ್ಕೆ ತಾಲೂಕು ಆಡಳಿತ ಜಾಗ ನೀಡಬೇಕು. ವಿಶ್ವಕರ್ಮ ಸಮಾಜ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸಾಕಷ್ಟು ಹಿಂದುಳಿದಿದೆ. ಈ ಸಮಾಜವನ್ನು ಮುಖ್ಯವಾಹಿನಿ ತರಲು ಸರ್ಕಾರ ಮೀಸಲಾತಿ ನೀಡಬೇಕು. ಬಗ್ಗೆ ಸುಮಾರು ವರ್ಷಗಳಿಂದ ಹೋರಾಟ ನಡೆಸಿದರು, ಸರ್ಕಾರ ನಿರ್ಲಕ್ಷ್ಯಿಸಿವೆ. ಆದರೆ, ಮುಂದುವರಿದ ಸಮಾಜಕ್ಕೆ ಮೀಸಲಾತಿ ನೀಡಿ, ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡದೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಇಟ್ಟಿದೆ ಇದರ ಪರಿಣಾಮ ಮುಂಬರುವ ಚುನಾವಣೆಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಖಜಾಂಚಿ ಹೊಸಪೇಟೆ ಮೂರ್ತಿ ಎಚ್ಚರಿಸಿದರು.