ನುಗ್ಗೇಹಳ್ಳಿ: ಜಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ರತ್ನಮ್ಮ ಹಾಗೂ ಉಪಾಧ್ಯಕ್ಷರಾಗಿ ಅವ್ವೇರಹಳ್ಳಿ ಹರೀಶ್ ಆಯ್ಕೆಯಾದರು.
ಒಟ್ಟು 15 ಸದಸ್ಯರಿರುವ ಪಂಚಾಯಿತಿಯಲ್ಲಿ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಸದಸ್ಯೆ ಲಕ್ಷ್ಮೀದೇವಿ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯೆ ರತ್ನಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಪ್ರಕಾಶ್ ಹಾಗೂ ಕಾಂಗ್ರೆಸ್ ಬೆಂಬಲಿತ ಅವ್ವೇರಹಳ್ಳಿ ಹರೀಶ್ ನಾಮಪತ್ರ ಸಲ್ಲಿಸಿದ್ದರು.
ಲಕ್ಷ್ಮೀದೇವಿ ಹಾಗೂ ಪ್ರಕಾಶ್ ತಲಾ 7 ಮತ ಪಡೆದರು ಪರಾಭವಗೊಂಡರು. ರತ್ನಮ್ಮ ಹಾಗೂ ಹರೀಶ್ ತಲಾ 8 ಮತ ಪಡೆದು ಅಧ್ಯಕ್ಷೆ, ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಕೃಷ್ಣ ಕಾರ್ಯನಿರ್ವಹಿಸಿದರು.
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ. ಎ.ರಂಗಸ್ವಾಮಿ, ಕಾಂಗ್ರೆಸ್ ಮುಖಂಡರಾದ ಎಂ.ಎ.ಕುಮಾರಸ್ವಾಮಿ, ಜಂಬೂರು ಸುರೇಶ್, ಜಗದೀಶ್, ಹತ್ತಿಹಳ್ಳಿ ಮಹಾಲಿಂಗೇಗೌಡ, ಹುಲಿಕೆರೆ ಶಿವಸ್ವಾಮಿ, ಮುದ್ದನಹಳ್ಳಿ ರಮೇಶ್, ಅವ್ವೇರಹಳ್ಳಿ ರಮೇಶ್, ಆನಂದ, ದೊರೆ, ಹೊನ್ನ ಮಾರನಹಳ್ಳಿ ಕುಮಾರಸ್ವಾಮಿ, ಸುರೇಶ್, ಗಂಗಾಧರ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಎ. ನಾರಾಯಣಸ್ವಾಮಿ, ದೇವರಾಜ, ತೆಂಕನಹಳ್ಳಿ ಮಹೇಶ್, ಸಾವಿತ್ರಮ್ಮ, ಲೀಲಾವತಿ, ಗೀತಾ, ಪಿಡಿಒ ಶಿವರಾಂ ಇತರರು ಇದ್ದರು.