ಜಿಲ್ಲೆ

ಜಂಬು ನೇರಳೆ ತೋಟಕ್ಕೆ ಹಾಸ್ಯ ನಟ ಭೇಟಿ

ಚಿಂತಾಮಣಿ : ತಾಲೂಕಿನ ಕೈವಾರ ಹೋಬಳಿ ಜಂಗಮಸೀಗೆಹಳ್ಳಿಯ ಪ್ರಗತಿಪರ ರೈತ ನಾರಾಯಣ ಸ್ವಾಮಿ ಸುಮಾರು 5 ಎಕರೆಯಲ್ಲಿ ಬೆಳೆದಿರುವ ಜಂಬು ನೇರಳೆ ಹಣ್ಣಿನ ತೋಟಕ್ಕೆ ಆಂಧ್ರಪ್ರದೇಶದ ಹಾಸ್ಯ ನಟ ಡಾ.ರಾಜೇಂದ್ರಪ್ರಸಾದ್ ಶನಿವಾರ ಭೇಟಿ ನೀಡಿ ಬೆಳೆ ಬಗ್ಗೆ ಮಾಹಿತಿ ಪಡೆದರು.

ರೈತ ನಾರಾಯಣಸ್ವಾಮಿ ಅವರು ರಾಜ್ಯ ಸರ್ಕಾರದ ಸುಜಲಾ ಯೋಜನೆಯಡಿ 15 ವರ್ಷಗಳ ಹಿಂದೆ ಜಂಬು ನೇರಳೆ ಹಣ್ಣಿನ 250 ಗಿಡಗಳ ಜತೆಗೆ 180 ಬೆಟ್ಟದ ನಲ್ಲಿಕಾಯಿ ಗಿಡಗಳನ್ನು ಪಡೆದು ಆ ಮರಗಳಿಗೆ ಸಾವಯುವ ಗೊಬ್ಬರ ಬಳಸಿ ಉತ್ತಮ ಸಲು ಪಡೆಯುತ್ತಿರುವ ಬಗ್ಗೆ ತಿಳಿದು ಸ್ನೇಹಿತರೊಂದಿಗೆ ಸ್ಥಳ ವೀಕ್ಷಣೆಗೆ ಬಂದಿದ್ದೇನೆ ಎಂದರು.

11ನೇ ವಾರ್ಡಿನ ನಗರಸಭೆ ಸದಸ್ಯ ಅಕ್ಷಯಕುಮಾರ್, ವಾಸವಿ ಯುವಜನ ಸಂಘದ ಸುರೇಶ್ ಇತರರಿದ್ದರು.