ವಿಖ್ಯಾತ್ 
ಜಿಲ್ಲೆ

ಜಂಪ್‌ರೋಪ್ ಸ್ಪರ್ಧೆಯಲ್ಲಿ ವಿಖ್ಯಾತ್ ಪ್ರಥಮ

ಚಿಕ್ಕಮಗಳೂರು: ಇತ್ತೀಚೆಗೆ ರಾಜ್ಯದ ಚಾಮರಾಜನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಜಂಪ್ ರೋಪ್ ೩೦ ಸೆಕೆಂಡ್ ಸ್ಪೀಡ್ ಸ್ಪರ್ಧೆಯಲ್ಲಿ ನಗರದ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಟಿ.ಡಿ.ವಿಖ್ಯಾತ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, Ã ಮೂಲಕ ಜಿಲ್ಲೆಗೂ ಮತ್ತು ಕಾಲೇಜಿಗೂ ಕೀರ್ತಿ ತಂದಿದ್ದಾನೆ.

ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರೀಡಾಕೂಟ ಇದಾಗಿದ್ದು, ರಾಜ್ಯದ ೩೦ ಜಿಲ್ಲೆಗಳಿಂದ ವಿವಿಧ ಪದವಿ ಪೂರ್ವ ಕಾಲೇಜುಗಳ ಸುಮಾರು ೪೫೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆದರೆ ಚಿಕ್ಕಮಗಳೂರು ಜಿಲ್ಲೆಯ ವಿಖ್ಯಾತ್ ಕ್ರೀಡಾಕೂಟದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾನೆ. ಈತನ ಸಾಧನೆಗೆ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಡಾ. ಗ್ರೆಗರಿ ಲೋಬೊ ಅಭಿನಂದನೆ ಸಲ್ಲಿಸಿದ್ದಾರೆ.