ಕುಣಿಗಲ್: ಸರ್ವೇ ಇಲಾಖೆಯ ಅಧಿಕಾರಿಗಳ ರ್ನಿಲಕ್ಷ$್ಯ ಧೋರಣೆಯಿಂದ ತಾಲೂಕಿನ ಮೋದೂರು ಗ್ರಾಮದ ರೆತರ ಹಾಗೂ ಅರಣ್ಯ ಇಲಾಖೆಯ ನಡುವೆ ಸಂರ್ಷಕ್ಕೆ ಕಾರಣವಾಗಿದೆ. ಸರ್ವೇ ಅಧಿಕಾರಿಗಳು ನಡೆಸಿರುವ ಜಂಟಿ ಸರ್ವೇ ನೆಯನ್ನು ನೀಡಿ ಸಮಸ್ಯೆ ಪರಿಹಾರ ಮಾಡದಿದ್ದರೆ ರೆತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಮೋದೂರು ಗ್ರಾಮದ ಸರ್ವೇ ನಂಬರ್ 12ರಲ್ಲಿ ಪರಿಭಾವಿತ ಅರಣ್ಯ ಪ್ರದೇಶ ಗುರುತಿಸುವ ನಿಟ್ಟಿನಲ್ಲಿ ಸರ್ವೇ ನಡೆಸಿದ ಅಧಿಕಾರಿಗಳು 64 ಎಕರೆ ಬದಲು 64 ಹೇಕ್ಟರ್ ಎಂದು ನಮೂದು ಮಾಡಿರುವ ಎಡವಟ್ಟಿನಿಂದ ರೆತರಿಗೆ ಮಂಜೂರಾಗಿರುವ ಜಮೀನಿನ ದಾಖಲಾತಿ ಪಡೆದುಕೊಳ್ಳಲು ಸಾಧ್ಯವಾಗದೆ ಅಲೆದಾಡುವಂತಾಗಿದೆ. 10 ವರ್ಷದಿಂದ ರೆತರು ದಾಖಲಾತಿಗಾಗಿ ತಾಲೂಕು ಕಚೇರಿಗೆ ಅಲೆದು ರೋಸಿ ಹೋಗಿದ್ದಾರೆ. ಆರು ತಿಂಗಳ ಹಿಂದೆ ಶಾಸಕ ಡಾ.ರಂಗನಾಥ್ ಅವರ ಅಧ್ಯತೆಯಲ್ಲಿ ನಮಸ್ತೆ ಕುಣಿಗಲ್ ಕಾರ್ಯಕ್ರಮ ಯೋಜನೆಯಡಿ ಮೋದೂರು ಗ್ರಾಮದಲ್ಲಿ ಸಭೆ ನಡೆಸಿ ತಹಸೀಲ್ದಾರ್ ಹಾಗೂ ಅರಣ್ಯ ಇಲಾಖೆ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಗೆ ಜಂಟಿ ಸರ್ವೇ ನಡೆಸಿ ಸಮಸ್ಯೆ ಪರಿಹಾರ ಮಾಡಿ ರೆತರಿಗೆ ಅನುಕೂಲ ಮಾಡಿಕೊಡಲು ಸೂಚಿಸಿದರು.
ನಂತರ ತಹಸೀಲ್ದಾರ್ ಅವರ ಆದೇಶದ ಮೇರೆಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸರ್ವೇ ಮಾಡಲಾಗಿದ್ದು, ಸರ್ವೇ ಮಾಡಿ 6 ತಿಂಗಳು ಕಳೆದರೂ ಸರ್ವೇ ಇಲಾಖೆಯ ಮಂಜೇಶ್ ಹಾಗೂ ನಂದೀಶ್ ಅವರು ನೆ ತಯಾರಿಸಿ ಕೊಡದೆ ಕಾಲಹರಣ ಮಾಡುತ್ತಿದ್ದಾರೆ. ಶಾಸಕ ಹಾಗೂ ತಹಸೀಲ್ದಾರ್ ಅವರ ಆದೇಶಕ್ಕೆ ಸರ್ವೇ ಇಲಾಖೆಯ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡದೇ ವಿಳಂಬ ಧೋರಣೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಸ್ಥರು ಕೇಳಿದರೆ ಇಲ್ಲಸಲ್ಲದ ಸೊಬಗು ಹೇಳುತ್ತಿರುವ ಸರ್ವೇ ಅಧಿಕಾರಿಗಳ ಧೋರಣೆ ಖಂಡಿಸಿದ್ದಾರೆ. ರೆತರು ಜಮೀನುಗಳ ದಾಖಲಾತಿ ಮಾಡಿಕೊಳ್ಳುವ ನಿಟ್ಟಿನಲ್ಲಿ 10 ವರ್ಷದಿಂದ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿ ಪರದಾಡುತ್ತಿದ್ದಾರೆ. ಈ ಸಂಬಂಧ ಮೇಲಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಒಂದು ವಾರದಲ್ಲಿ ಸರ್ವೇ ನೆ ತಯಾರಿಸಿ ಕೊಡದಿದ್ದರೆ ತಾಲೂಕು ಕಚೇರಿ ಮುಂದೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.