ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಒಕ್ಕೂಟದ ಜಿಲ್ಲಾಧ್ಯಕ್ಷ ಯಲ್ಲಪ್ಪ ಸನಕೆನ್ನವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಾಗಲಕೋಟೆ ತಾಲೂಕು ಅಧ್ಯಕ್ಷ ಆಂಜನೇಯ ಕಾಗಿ, ಮುಖಂಡರಾದ ನಾಗರಾಜ ದಳವಾಯಿ, ಬಾಳು ಬಾವಲತ್ತಿ, ಮುಕ್ತುಬ್ ಸಾಬ ದೊಡ್ಡಮನಿ, ಅಬ್ದುಲ್ ರಜಾಕ್ ಸಣ್ಣಕ್ಕಿ ಇತರರು ಇದ್ದರು. 
ಜಿಲ್ಲೆ

ಜ.೨೨ ರಂದು ಬೀದಿ ಬದಿ ವ್ಯಾಪಾರಸ್ಥರ ಬೃಹತ್ ಸಮಾವೇಶ

ಬಾಗಲಕೋಟೆ: ರಾಷ್ಟಿçÃಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಅಂಗವಾಗಿ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಒಕ್ಕೂಟದ ನೇತೃತ್ವದಲ್ಲಿ ಜ.೨೨ ರಂದು ಬಾಗಲಕೋಟೆ ನಗರದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಯಲ್ಲಪ್ಪ ಸನಕೆನ್ನವರ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೯ ಗಂಟೆಗೆ ಹಳೇ ಬಾಗಲಕೋಟೆ ನಗರದ ಅಂಬೇಡ್ಕರ ವೃತ್ತದಿಂದ ಮೆರವಣಿಗೆ ಆರಂಭವಾಗಿ ನಗರದ ವಿವಿಧೆಡೆ ಸಂಚರಿಸಲಿದೆ. ಬಳಿಕ ೧೧ ಗಂಟೆಗೆ ತರಕಾರಿ ಮಾರುಕಟ್ಟಿ ಪ್ರದೇಶದಲ್ಲಿ ಸಮಾವೇಶ ಕಾರ್ಯಕ್ರಮ ಜರುಗಲಿದೆ. ಸಂಸದ ಪಿ.ಸಿ.ಗದ್ದಿಗೌಡರ, , ಶಾಸಕರಾದ ಎಚ್.ವೈ.ಮೇಟಿ, ಬಿ.ಬಿ.ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ, ಜೆ.ಟಿ.ಪಾಟೀಲ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ಯುವ ಮುಖಂಡರಾದ ಸಂತೋಷ ಹೊಕ್ರಾಣಿ, ಮಲ್ಲಿಕಾರ್ಜುನ ಚರಂತಿಮಠ, ಡಾ.ಶೇಖರ ಮಾನೆ ಸೇರಿದಂತೆ ಇತರ ನಾಯಕರು ಪಾಲ್ಗೊಳ್ಳಿದ್ದಾರೆ ಎಂದರು.

ಸಮಾವೇಶದ ಅಂಗವಾಗಿ ಬಾಗಲಕೋಟೆ ನಗರದಲ್ಲಿರುವ ೧೫೦೦ ಕ್ಕೂ ಬೀದಿ ಬದಿ ವ್ಯಾಪಾರಸ್ಥರು ತಮ್ಮ ಅಂಗಡಿ, ಮುಂಗಟ್ಟು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಲಿದ್ದಾರೆ. ಉಚಿತವಾಗಿ ಆರೋಗ್ಯ ತಪಾಸಣೆ ನಡೆಯಲಿದೆ ಎಂದರು.

ಬಾಗಲಕೋಟೆ ತಾಲೂಕು ಅಧ್ಯಕ್ಷ ಆಂಜನೇಯ ಕಾಗಿ, ಮುಖಂಡರಾದ ನಾಗರಾಜ ದಳವಾಯಿ, ಬಾಳು ಬಾವಲತ್ತಿ, ಮುಕ್ತುಬ್ ಸಾಬ ದೊಡ್ಡಮನಿ, ಅಬ್ದುಲ್ ರಜಾಕ್ ಸಣ್ಣಕ್ಕಿ ಇತರರು ಇದ್ದರು.