ಬಾಗಲಕೋಟೆ: ಬಾಗಲಕೋಟೆಯ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಅಡಿಯಲ್ಲಿ ಬರುವ ಡಿಎಂಎಲ್‌ಟಿಸಿ ವಿಭಾಗದ ಹಳೆಯ ವಿದ್ಯಾರ್ಥಿಗಳು ವಿಜಯಪುರದ ಬಿಎಲ್‌ಡಿ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿಗಳಾಗಿದ್ದ ಹೆಸರಾಂತ ಪೆಥಾಲಾಜಿಸ್ಟ್ ಡಾ.ಸತೀಶ ಜಿಗಜಿನ್ನಿ ಅವರ ಗುರುವಂದನಾ ಸಮಾರಂಭವನ್ನು ಜ.೧೯ ರಂದು ಹಮ್ಮಿಕೊಳ್ಳಲಾಗಿದೆ.
೭೫ನೇ ವರ್ಷದ ಹುಟ್ಟುಹಬ್ಬ ಹಾಗೂ ಗುರುವಂದನಾ ಸಮಾರಂಭವು ನಗರದ ಬಿವಿವಿ ಸಂಘದ ಮಿನಿಸಭಾಭವನದಲ್ಲಿ ಭಾನುವಾರ ಬೆಳಗ್ಗೆ ೧೦ ಗಂಟೆಗೆ ನಡೆಯಲಿದ್ದು, ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ಸಿ.ಎಸ್.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರದ ಶಸ್ತç ಚಿಕಿತ್ಸಕರು ಕೆರೂಡಿ ಆಸ್ಪತ್ರೆಯ ಮುಖ್ಯಸ್ಥ ಡಾ.ಬಸವರಾಜ ಕೆರೂಡಿ, ಸಿöÃ ರೋಗ ತಜ್ಞ ಡಾ.ಅನಸೂಯಾ ಕೆರೂಡಿ ಆಗಮಿಸಲಿದ್ದಾರೆ.