ಬಾಗಲಕೋಟೆ: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದು, ಬಾಗಲಕೋಟೆ ನಗರಕ್ಕೆ ಜ.೧೮ ರಂದು ಆಗಮಿಸಲಿದೆ. ನವನಗರದಲ್ಲಿ ಕಾಳಿದಾಸ ಮೈದಾನದಲ್ಲಿ ಅಂದು ಬೆಳಗ್ಗೆ ೧೧ ಗಂಟೆಗೆ ಬೃಹತ್ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಯಾತ್ರೆಯ ಸಮನ್ವಯ ಸಮಿತಿ ಅಧ್ಯಕ್ಷ ಬಸವರಾಜ ರಾಯರೆಡ್ಡಿ ಹೇಳಿದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ ಸೇರಿದಂತೆ ಕಾಂಗ್ರೆಸ್ ಹಲವಾರು ನಾಯಕರು, ಮುಖಂಡರು ಭಾಗವಹಿಸಲಿದ್ದಾರೆ. ಬಾಗಲಕೋಟೆ ಜಿಲ್ಲೆಯಿಂದ ೫೦ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೧೯೨೪ ರಲ್ಲಿ ಮಹಾತ್ಮಾಗಾಂಧಿ ಅವರು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿ, ಬ್ರಿಟಿಷರೇ ತೊಲಗಿರಿ ಎಂದಿದ್ದರು. ಇದೀಗ ಅದೇ ಪುಣ್ಯ ನೆಲದಿಂದ ಜ.೧೧ ರಂದು ಬೆಳಗಾವಿಯಲ್ಲಿ ಯಾತ್ರೆ ಆರಂಭಿಸಲಾಗುವುದು. ಇದೀಗ ಬಿಜೆಪಿ ತೊಲಗಿಸಿ ದೇಶ ಉಳಿಸಿ ಘೋಷಣೆ ಮೂಲಕ ರಾಜ್ಯದಲ್ಲಿ ಸಂಚಾರ ನಡೆಸಲಾಗುವುದು. ಬಾಗಲಕೋಟೆಗೆ ಹುನಗುಂದ ಮೂಲಕ ಯಾತ್ರೆ ಪ್ರವೇಶ ಮಾಡಲಿದೆ. ನಂತರ ಗದಗ ಜಿಲ್ಲೆಗೆ ಪ್ರಯಾಣ ಬೆಳೆಸಲಿದೆ. ಮಾ.೧೦ ಗಂಟೆಗೆ ಯಾತ್ರೆ ಧಾರವಾಡದಲ್ಲಿ ಮುಕ್ತಾಯಗೊಳ್ಳಲಿದೆ. ಬಿಜೆಪಿ ನೀತಿ, ಜನ ವಿರೋಽ ಆಡಳಿತ ಮತದಾರರಿಗೆ ತಲುಪಿಸಲಾಗುವುದು. ಇದಾದ ಬಳಿಕ ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಪ್ರತ್ಯೇಕವಾಗಿ ಆಯಾ ವಿಧಾನಸಭಾವಾರು ಸಂಚಾರ ನಡೆಸಲಿದ್ದಾರೆ ಎಂದು ಹೇಳಿದರು.
ಇಂದು ರಾಜಕೀಯ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಎಲ್ಲ ಪಕ್ಷಗಳೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಶಿಸ್ತು, ಪ್ರಾಮಾಣಿಕರೆಂದು ಹೇಳಿಕೊಳ್ಳುವ ಬಿಜೆಪಿ ಅಧಿಕಾರ ಬಂದಿದೆ. ಈಗ ಅವರು, ಭ್ರಷ್ಟ, ಲಜ್ಜೆಗೆಟ್ಟ ಸರ್ಕಾರ ನಡೆಸುತ್ತಿz್ದÁರೆ. ಒಳ್ಳೆಯ ಆಡಳಿತಕ್ಕೆ ಅವಕಾಶ ನೀಡಬೇಕು. ಪೆಬ್ರವರಿ ತಿಂಗಳಿನಲ್ಲಿ ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ಯಾತ್ರೆಗಳು ನಡೆಯಲಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ, ಸುನೀಲ್‌ಗೌಡ ಪಾಟೀಲ, ಕಾಂಗ್ರೆಸ್ ಮುಖಂಡರಾದ ಎಸ್.ಆರ್. ಪಾಟೀಲ, ಶರಣಪ್ಪ ಮಟ್ಟೂರ, ಆರ್.ಬಿ. ತಿಮ್ಮಾಪುರ, ಐ.ಜಿ. ಸನದಿ, ಅಜಯಕುಮಾರ ಸರನಾಯಕ, ಎಸ್.ಜಿ. ನಂಜಯ್ಯನಮಠ, ಜೆ.ಟಿ. ಪಾಟೀಲ, ಎಚ್.ವೈ. ಮೇಟಿ, ಸತೀಶ ಬಂಡಿವಡ್ಡರ ಇದ್ದರು.