ಬಾಗಲಕೋಟೆ: ಸ್ವಾಮಿ ವಿವೇಕಾನಂದರ ಯುವ ವಿಚಾರ ವೇದಿಕೆ, ರಾಮಕೃಷ್ಣ ಶಾರದಾಂಬ ವಿವೇಕಾನಂದ ಆಧ್ಯಾತ್ಮೀಕ ಕೇಂದ್ರ, ವಿವೇಕ ವಿಚಾರ ವಿಸ್ತಾರ ವ್ಯಕ್ತಿತ್ವ ವಿಕಸನ ಹಾಗೂ ಪರಿಸರ ಜಾಗೃತಿ ಅಭಿಯಾನ ವತಿಯಿಂದ ಈ ಸಾರಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಉಪನ್ಯಾಸ ಕಾರ್ಯಕ್ರಮ ಹಮ್ಮಕೊಳ್ಳಲಾಗಿದೆ ಎಂದು ಕೇಂದ್ರದ ಸಂಸ್ಥಾಪಕ ಆನಂದ ಶಿರಬೂರ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.೧೨ ರಿಂದ ೨೩ ರವರೆಗೆ ನಡೆಯಲಿದ್ದು, ಜ.೧೨ ರಂದು ದಿವ್ಯತ್ರೆÊಯರ ಪೂಜೆ ಹಾಗೂ ಮಹಾ ಸರಸ್ವತಿ ಹೋಮದೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದರು.
ಜಿಲ್ಲೆಯ ೨೧ ಆಯ್ದ ಕಾಲೇಜುಗಳಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಪರಿಸರ ಜಾಗೃತಿ ಅಭಿಯಾನ ನಡೆಯಲಿದ್ದು, ವಿದ್ಯಾರ್ಥಿಗಳಲ್ಲಿ ಸ್ವಾಮಿ ವಿವೇಕಾನಂದರ ವಿಚಾರಗಳನ್ನು ತಿಳಿಸುವುದರ ಮೂಲಕ ಅವರ ಭವಿಷ್ಯವನ್ನು ಉಜ್ವಲವಾಗಿ ನಿರ್ಮಿಸಿಕೊಳ್ಳುವ ನಿಟ್ಟಿನಲ್ಲಿ ಪ್ರೇರಣಾದಾಯಿ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿದರು.
ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮೀಜಿಗಳು, ಅನೇಕ ಜನ ಭಾಷಣಕಾರರು ಆಧ್ಯಾತ್ಮೀಕ ಕೇಂದ್ರದ ಹಿರಿಯರು, ವಿದ್ಯಾರ್ಥಿಗಳಿಗೆ ಮಾರ್ಗ ದರ್ಶನ ಮಾಡುವರು. ೨೧ ಕಾಲೇಜುಗಳ ಹತ್ತು ಸಾವಿರ ವಿದ್ಯಾರ್ಥಿಗಳನ್ನು ತಲುಪಿ ಎಲ್ಲಾ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಉಚಿತವಾಗಿ ಹಂಚುವ ಯೋಜನೆಯಾಗಿದೆ ಎಂದು ತಿಳಿಸಿದರು.
ಅಭಿಯಾನವು ಜಮಖಂಡಿ ತಾಲೂಕಿನ ಮರೇಗುದ್ದಿಯಿಂದ ಆರಂಭವಾಗಲಿದೆ. ಸಮಾರಂಭದಲ್ಲಿ ಸಂಸ್ಥೆಯ ಮಾರ್ಗದರ್ಶಕರು ನಮಗೆ ಬಾಲ್ಯ ಶಿಕ್ಷಣ ಕಲಿಸಿ ಲಿಂಗೈಕ್ಯರಾಗಿರುವ ಪೂಜ್ಯ ಗುರುಗಳ ಸ್ಮರಣಾರ್ಥವಾಗಿ ನೀಡಲಾಗುವುದು. ರಾಜ್ಯ ಮಟ್ಟದ ವಿವೇಕ ಚೇತನ ಪ್ರಶಸ್ತಿಗೆ ಮಂಡ್ಯ ಜಿಲ್ಲೆಯ ಲೀಲಾರಾಣಿ ಬಿ.ಎಸ್., ತುಮಕೂರಿನ ಶೀವರಾಜ ಮೂಲೆಮನಿ, ಬಾಗಲಕೋಟೆಯ ಮಹಾಂತೇಶ ನರಸನಗೌಡ್ರ, ಸುರೇಶ ಯಡಹಳ್ಳಿ ಹಾಗೂ ರಾಯಚೂರಿನ ಮಂಜುನಾಥ ಡಿ.ಎಲ್. ಅವರನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕಳೆದ ೨೦ ವರ್ಷಗಳಿಂದ ಸೇವೆ ಸಲ್ಲಿಸುತ್ತ ಶಾಲಾ ಮಕ್ಕಳ ಉನ್ನತಿಗಾಗಿ ಶ್ರಮಿಸುತ್ತಿರುವುದಕ್ಕೆ ಆಯ್ಕೆ ಮಾಡಲಾಗಿದೆ ಎಂದರು.
ಮುಖ0ಡರಾದ ಶ್ರೀಸ್ವಾಮಿ ಗಿರಿಜೇಶಾನಂದ ಮಹಾರಾಜ, ಪ್ರವೀಣ ಅಂಗನ್ನವರ, ಸಿದ್ದು ಹೂಗಾರ, ಶ್ರೀಶೈಲ ಹುನ್ನೂರ, ಗಂಗಾಧರ ಬಿಂಗಿ ಇದ್ದರು.