ಹಾಸನ: ಬೇಡ ಜಂಗಮ ಸಮಾಜದ ವತಿಯಿಂದ ಜ.21ರಂದು ಸಮಾಜದ ಜಾಗೃತಿ ಕಾರ್ಯಕ್ರಮ ಮತ್ತು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ತಾಲೂಕಿನ ದೊಡ್ಡಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಯ್ಯ ತಿಳಿಸಿದರು.
ತಾಲೂಕಿನ ದೊಡ್ಡಪುರ ಗ್ರಾಮದ ಶ್ರೀ ಉದ್ಭವ ರಾಮೇಶ್ವರ ವಿಪ್ರ ಸಭಾಭವನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಖಾ ಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಇದರ ಜೊತೆಗೆ ಮುಖ್ಯ ಅತಿಥಿಗಲಾಗಿ ಸಮಾಜದ ಮುಖಂಡರಾದ ಎಸ್.ಟಿ. ಹಿರೇಮಠ್, ಎಸ್.ರುದ್ರೇಶ್, ಚಂದ್ರಶೇಖರ್, ಎಂ.ಡಿ. ಚಂದ್ರಶೇಖರ್ ಅವರು ಆಗಮಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಆಗಮಿಸಬೇಕಾಗಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಬೇಡ ಜಂಗಮ ಸಮಾಜವು ಅತ್ಯಂತ ಚಿಕ್ಕ ಸಮಾಜವಾಗಿದ್ದು, ನಮಗೆ ಸರ್ಕಾರದಿಂದ ಸಿಗುವಂತಹ ಮೂಲಭೂತ ಸೌಕರ್ಯಗಳ ಬಗ್ಗೆ ನಮ್ಮ ಸಮಾಜದವರಿಗೆ ಮನವರಿಕೆ ಮಾಡಿಕೊಡುವುದರ ಜತೆಗೆ ನಮಗೆ ಮೀಸಲಾತಿಯನ್ನು ಕಲ್ಪಿಸುವಂತೆ ಒತ್ತಾಯಿಸಿ ಈ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬೇಡ ಜಂಗಮ ಸಮಾಜದ ರಾಜ್ಯಾಧ್ಯಕ್ಷ ಎಸ್.ಕೆ. ಕುಮಾರಸ್ವಾಮಿ, ಸಂಚಾಲಕ ಟಿ.ಎನ್. ರಘು, ಕಾರ್ಯದರ್ಶಿ ಧರ್ಮೇಶ್ ಕುಮಾರ್ ಇದ್ದರು.