ಜಿಲ್ಲೆ

ಜ.17 ರಿಂದ 19 ರವರೆಗೆ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್

ಚಾಮರಾಜನಗರ: ಅಂತರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ಮತ್ತು ವಿಜಯಾನಂದ ಟ್ರಾವೆಲ್ಸ್ ಸಹಯೋಗದಲ್ಲಿ ಜ.17, 18 ಮತ್ತು 19 ರಂದು ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ತಿಳಿಸಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸಮ್ಮೇಳನವನ್ನು ಜ.17 ಬೆಳಗ್ಗೆ 10.30 ಗಂಟೆಗೆ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಕೇಂದ್ರಸ್ವಾಮೀಜಿ ಉದ್ಘಾಟಿಸುವರು. ಬೃಹತ್ ಮತ್ತು ಸಣ್ಣ ಕೈಗಾರಿಕ ಸಚಿವ ಎಂ.ಬಿ.ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ರಾಜ್ಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಿರ್ದೇಶಕ ನಿತೇಶ್ ಪಾಟೀಲ್, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಅಧ್ಯಕ್ಷ ನ್ಯಾ.ಸುಭಾಷ್ ಬಿ.ಆದಿ, ೆಡರೇನ್ ಆ್ ಇಂಡಸ್ಟ್ರೀಸ್ ಆ್ ಇಂಡಿಯಾ ಅಧ್ಯಕ್ಷ ಬಾಲಚಂದ್ರಸಿನ್ಹಾ ರಾವರಾನೆ, ಆದರ್ಶ ಗ್ರ್ೂ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಜಯಶಂಕರ್, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹಾಗೂ ಏಎಲ್‌ವೈಎ್ ಸಂಸ್ಥಾಪಕ ಅಧ್ಯಕ್ಷ ಮತ್ತು ದಾವಣಗೆರೆ-ಚಿತ್ರದುರ್ಗ ಎಂಎಲ್‌ಸಿ ಕೆ.ಎಸ್.ನವೀನ್ ಮುಖ್ಯಅತಿಥಿಗಳಾಗಿ ಭಾಗವಹಿಸುವರು ಎಂದು ಸೋಮವಾರ ಸುದ್ದಿಗೋಷ್ಠಿ ಮಾಹಿತಿ ನೀಡಿದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ 2.30 ಗಂಟೆಗೆ ಮೈಕ್ರೋ ್ಯಾಮಿಲಿ ಬಿಸಿನೆಸ್ ವಿಷಯದ ಕುರಿತು ಕೆ.ಉಲ್ಲಾಸ್ ಕಾಮತ್ ವಿಚಾರ ಸಂಕಿರಣ ನಡೆಸಿಕೊಡುವರು. ಜ.18 ರಂದು ಬೆಳಗ್ಗೆ 10.30-12.30 ರವರೆಗೆ ಆರೋಗ್ಯ ಶೃಂಗಸಭೆ-ವೈದ್ಯಕೀಯ ನಾಯಕತ್ವ ವಿಷಯ, ಮಧ್ಯಾಹ್ನ 2.30 ಗಂಟೆಗೆ ಮಹಿಳಾ ಉದ್ಯಮಶೀಲತೆ ವಿಷಯವಾಗಿ ವಿಚಾರ ಸಂಕಿರಣ ನಡೆಯಲಿದೆ. ಸಂಜೆ 4-5 ಗಂಟೆಯ ವರೆಗೆ ದಿ ವಿಷನ್ ಆ್ ಆನಂದ್ ಸಂಕೇಶ್ವರ್ ವಿಷಯದ ಕುರಿತು ವಿಆರ್‌ಎಲ್ ಲಾಜಿಸ್ಟಿಕ್ ಲಿ. ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ್ ಸಂಕೇಶ್ವರ್ ವಿಚಾರ ಮಂಡಿಸುವರು ಎಂದು ಹೇಳಿದರು.

ಕೊನೆಯ ದಿನ ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣ ಹಾಗೂ ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಶಾಸಕ ವಿಜಯಾನಂದ ಕಾಶ್ಯಪ್ಪನವರ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಶ್ರೀವತ್ಸ, ಕೆ.ಹರೀಶ್‌ಗೌಡ ಹಾಗೂ ಇತರರು ಮುಖ್ತ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಗೋಷ್ಠಿಯಲ್ಲಿ ಐಎಲ್‌ವೈಎ್ ಮೈಸೂರು ವಿಭಾಗದ ಅಧ್ಯಕ್ಷ ಕೆ.ಎಸ್.ಮಹದೇವಪ್ರಸಾದ್, ಉಪಾಧ್ಯಕ್ಷ ಎಂಆರ್‌ಎ ಮಹೇಶ್, ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರದೀಪ್ ಆಲೂರು, ಕೆ.ಎಚ್.ಕಿರಣ್, ಸದಸ್ಯ ಗಿರೀಶ್ ದೊಡ್ಡರಾಯಪೇಟೆ ಹಾಜರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳು:

ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜ.17 ರಂದು ಸಂಜೆ 6.30 ಗಂಟೆಗೆ ಚಿತ್ರನಟ ಡಾಲಿ ಧನಂಜಯ್ ಚಾಲನೆ ನೀಡುವರು. ಸಂಗೀತ ನಿರ್ದೇಶಕ ಮತ್ತು ಗಾಯಕ ವಾಸುಕಿ ವೈಭವ್ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಜ.18 ರಂದು ಗಾಯಕ ರಾಜೇಶ್ ಕೃಷ್ಣನ್ ಮತ್ತು ಅರ್ಚನಾ ಉಡುಪ ಕಾರ್ಯಕ್ರಮ ನಡೆಸಿಕೊಡುವರು. ಜ.19 ರಂದು ಹಿನ್ನೆಲೆ ಗಾಯಕಿ ಅನನ್ಯಾ ಭಟ್ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು.

ಇದು ಅತ್ಯಂತ ಮಹತ್ವವಾದ ಕಾರ್ಯಕ್ರಮವಾಗಿದ್ದು, ಉದ್ಯಮದಲ್ಲಿ ಸಾಧನೆ ಮಾಡಬೇಕು ಎಂದು ಕನಸು ಕಾಣುತ್ತಿರುವವರಿಗೆ ಅತ್ಯಂತ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮ್ಮೇಳನಕ್ಕೆ ಭಾಗವಹಿಸಬೇಕು.

-ನಂದೀಶ್ ಮೂಡ್ಲುಪುರ, ಜಿಲ್ಲಾಧ್ಯಕ್ಷ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಚಾಮರಾಜನಗರ