ಜಿಲ್ಲೆ

ಛಾವಣಿ ಮೇಲಿನ ಮುಳ್ಳು ಕಂಟಿ ತೆರವಿಗೆ ಆಗ್ರಹ

ಕೊಡೇಕಲ್: ವಲಯದ ಮದಲಿಂಗನಾಳ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ-೧ರ ಸುತ್ತಲು ಮತ್ತು ಛಾವಣಿ ಮೇಲೆ ಮುಳ್ಳು ಕಂಟಿ ಆವರಿಸಿದ್ದು, ಕೂಡಲೇ ಅದನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಕ್ಕಳ ಶಿಕ್ಷಣಕ್ಕೆ ಭದ್ರ ಬುನಾದಿಯಾಗಿರುವ ಅಂಗನವಾಡಿ ಕೇಂದ್ರಗಳು ಕಲಿಕಾ ವಾತಾವರಣಕ್ಕೆ ಪೂರಕವಾಗಿರಬೇಕು. ಆದರೆ ಈ ಗ್ರಾಮದಲ್ಲಿ ಕೇಂದ್ರದ ಸುತ್ತಲು ಮತ್ತು ಛಾವಣಿ ಮೇಲೆ ಮುಳ್ಳು ಕಂಟಿ ಆವರಿಸಿಕೊಂಡಿದ್ದರಿAದ ಮಕ್ಕಳು ನಿತ್ಯ ವಿಷ ಜಂತುಗಳ ಭಯದಲ್ಲಿ ಕಾಲ ಕಳೆಯಬೇಕಾಗಿದೆ ಎಂದು ದೂರಿದರು.

ಇಡೀ ಕೇಂದ್ರದ ಸುತ್ತಲು ಆವರಿಸಿಕೊಂಡಿದ್ದರಿAದ ಗಾಳಿ ಬೆಳಕು ಬರದಂತಾಗಿದ್ದು, ಇದರಿಂದ ಮಕ್ಕಳ ಆರೋಗ್ಯಕ್ಕೂ ಕುತ್ತು ತರುವಂತಿದೆ. ಇದು ಪಾಲಕರಿಗೂ ಭೀತಿ ತರಿಸಿದೆ. ಹೀಗಾಗಿ ಕೂಡಲೇ ಈ ಮುಳ್ಳು ಕಂಟಿ ತೆರವುಗೊಳಿಸಿ ಮಕ್ಕಳ ಕಲಿಕೆಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಅನೇಕ ಬಾರಿ ಮಾರನಾಳ ಗ್ರಾಪಂ ಉಪಾಧ್ಯಕ್ಷ ಸೋಮಲಿಂಗಪ್ಪ ಬಿರಾದಾರ ಅವರು ಪಿಡಿಒ ಅವರಿಗೆ ಮನವಿ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಪಂ ಸದಸ್ಯ ನಿಂಗಣ್ಣ ಕುರಿ ಆರೋಪಿಸಿದ್ದಾರೆ. ಈಗಲಾದರೂ ಸಂಬAಧಿಸಿದ ಮೇಲಧಿಕಾರಿಗಳು ಕೂಡಲೇ ಅಂಗನವಾಡಿ ಕೇಂದ್ರದ ಸುತ್ತಲು ಆವರಿಸಿಕೊಂಡ ಮುಳ್ಳು ಕಂಟಿ ತೆರವುಗೊಳಿಸಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಉಪಾಧ್ಯಕ್ಷರ ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ ಗ್ರಾಪಂಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.