ರಾಮದುರ್ಗ: ತಂತ್ರಜ್ಞಾನದ ಸದ್ಬಳಕೆಯಾಗಬೇಕು. ದುರುಪಯೋಗವಾಗಬಾರದು ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ತಾಲೂಕು ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ನೇತೃತ್ವದಲ್ಲಿ ಪಟ್ಟಣದ ತಾಪಂ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 184ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಘದ ಮುಖಂಡರು ಜಾಗದ ಬೇಡಿಕೆ ಇಟ್ಟಿದ್ದು, ಪರಿಶೀಲಿಸಲಾಗುವುದು ಎಂದರು.
ಛಾಯಾಗ್ರಹದಲ್ಲಿ ಪ್ರಶಸ್ತಿ ಪಡೆದ ನಿಂಗಪ್ಪ ಮುಗಳಿ, ಪತ್ರಿಕಾ ವಿತರಕ ಗಣೇಶ ಮುನವಳ್ಳಿ, ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಛಾಯಾಗ್ರಾಹಕ ಕುಟುಂಬದ ವಿದ್ಯಾರ್ಥಿಗಳು, ನಮ್ಮ ಕುಟುಂಬ ಅವಾರ್ಡ್ ಪಡೆದ ಹಿರೇಮಠ ಕುಟುಂಬಸ್ಥರನ್ನು ಸತ್ಕರಿಸಲಾಯಿತು.
ನೂತನ ಪದಾಧಿಕಾರಿಗಳ ಪದಗ್ರಹಣ ಜರುಗಿತು. ತಾಲೂಕು ಘಟಕದ ಅಧ್ಯಕ್ಷ ಶಿವರಾಜ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪಿಎಸ್‌ಐ ಸುನೀಲ ನಾಯಕ, ಬಸವರಾಜ ರಾಯಣ್ಣವರ, ಮಂಜುನಾಥ ದೊಡಮನಿ, ಪ್ರಕಾಶ, ನಾಮದೇವ ಕೊಳೇಕರ, ಗುರು ಮುಗಳಿ, ಕಾಂತೇಶ ರಾಠೋಡ, ಗಣೇಶ ಖಾನಪೇಠ, ದೇವೇಂದ್ರ ಬಡಿಗೇರ, ಮುತ್ತು ಮಾಳಿ, ರಾಘವೇಂದ್ರ ಹೂಗಾರ, ವಿರೂಪಾಕ್ಷ ವಾಳೆದಾರ, ಶರಣಪ್ಪ ಬಡಿಗೇರ, ಮಹಾಂತೇಶ ನಾಯಕ, ಸುಭಾಷ ಬಾರ್ಕಿ, ಚಿದಾನಂದ ರಕ್ಷಿ, ಮೆಹಬೂಬ ತೊರಗಲ್, ನಾಗೇಶ ಮಹಾಲಿಂಗಪುರ ಇತರರು ಇದ್ದರು.