ಬಸವಕಲ್ಯಾಣದಲ್ಲಿ ಗುರುವಾರ ಆಯೋಜಿಸಿದ್ದ ಫೋಟೋಗ್ರಾಪರ್ಸ್ ಡೇ ಕಾರ್ಯಕ್ರಮವನ್ನು ಕೆಪಿಎ ಮಾಜಿ ಅಧ್ಯಕ್ಷ ಜಿ.ಪರಮೇಶ್ವರ ಉದ್ಘಾಟಿಸಿದರು. ಪವನಸಿಂಗ್ ಠಾಕೂರ್, ನಾಸೀರ್ ಅಹ್ಮದ್, ಸುರಜ ಪುರ್ಣಿಕ, ಅಶೋಕ ಸಜ್ಜನಶೆಟ್ಟಿ, ದಿನೇಶ ಗೊಂಟಲ್, ವಿನೋದ ಜಾಧವ, ಅಂಜನ್ ಕಲ್ಯಾಣಿ ಇತರರಿದ್ದರು. 
ಜಿಲ್ಲೆ

ಛಾಯಾಗ್ರಾಹಕರಿಗೆ ಕೌಶಲ ಅಭಿವೃದ್ಧಿ ತರಬೇತಿ

ಬಸವಕಲ್ಯಾಣ: ಛಾಯಾಚಿತ್ರ ಕಲಾವಿದರಲ್ಲಿರುವ ಪ್ರಾವಿಣ್ಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ನಿರಂತರ ಕಲಿಕೆ ಅವಶ್ಯಕ ಎಂದು ಕರ್ನಾಟಕ ಫೋಟೋಗ್ರಾಫರ್ ಅಸೋಸಿಯೇಷನ್ (ಕೆಪಿಎ) ಮಾಜಿ ಅಧ್ಯಕ್ಷ ಜಿ.ಪರಮೇಶ್ವರ ಹೇಳಿದರು.
ಬಸವಕಲ್ಯಾಣ ಛಾಯಾಗ್ರಾಹಕರ ಸಂಘದಿAದ ಗುರುವಾರ ನಗರದಲ್ಲಿ ಆಯೋಜಿಸಿದ್ದ ಫೋಟೋಗ್ರಾಫಿ ಡೇ ಕಾರ್ಯಕ್ರಮ ಉದ್ಘಾಟಿಸಿದ ಅವರು, ಛಾಯಾಚಿತ್ರ ಕಲಾವಿದರಲ್ಲಿ ಕೌಶಲ ಹೆಚ್ಚಿಸಲು ಕೆಪಿಎ ಅಕಾಡೆಮಿಯಿಂದ ಕೇಂದ್ರದ ಕೌಶಲ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಫೋಟೋಗ್ರಾಫಿ, ವಿಡಿಯೋಗ್ರಾಫಿ, ಎಡಿಟಿಂಗ್ ಮತ್ತು ಡಿಸೈನ್ ವಿಭಾಗದಲ್ಲಿ ಕೌಶಲ ಅಭಿವೃದ್ಧಿ ತರಬೇತಿ ಜತೆಗೆ ಪ್ರಮಾಣ ಪತ್ರ ನೀಡಲಾಗುವುದು ಎಂದರು.

ಹವ್ಯಾಸಿ ಫೋಟೋಗ್ರಾಫರ್ ತೆಗೆದ ಚಿತ್ರಕ್ಕೂ ಮತ್ತು ವೃತ್ತಿಪರ ಫೋಟೋಗ್ರಾಫರ್ ತೆಗೆದ ಚಿತ್ರಕ್ಕೆ ವ್ಯತ್ಯಾಸವಿದೆ. ಎರಡರ ನಡುವೆ ತುಲನೆ ಮಾಡಲು ಆಗದು, ಛಾಯಾಚಿತ್ರ ಕಲಾವಿದರು ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಸೋಷಿಯೇಷನ್ ಜಿಲ್ಲಾಧ್ಯಕ್ಷ ಪವನ್‌ಸಿಂಗ್ ಠಾಕೂರ್, ಜಿಲ್ಲಾ ಉಪಾಧ್ಯಕ್ಷ ನಾಸೀರ್ ಅಹ್ಮದ್, ಕಲಬುರಗಿ ಫೋಟೋ ಫ್ಲಾö್ಯಶ್ ಲ್ಯಾಬ್ ಮಾಲೀಕ ಸುರಜ ಪುರ್ಣಿಕ, ಹುಮನಾಬಾದ್‌ನ ಅಶೋಕ ಸಜ್ಜನಶೆಟ್ಟಿ, ತಾಲೂಕು ಅಧ್ಯಕ್ಷ ದಿನೇಶ ಗೊಂಟಲ್, ಉಪಾಧ್ಯಕ್ಷ ವಿನೋದ ಜಾಧವ್, ಪ್ರಧಾನ ಕಾರ್ಯದರ್ಶಿ ಧನರಾಜ ಸ್ವಾಮಿ, ಹುಲಸೂರು ತಾಲೂಕು ಅಧ್ಯಕ್ಷ ಅಂಜನ್ ಕಲ್ಯಾಣಿ, ಬಸವಕಲ್ಯಾಣ ಆಸೋಷಿಯೇಷನ್‌ನ ಸದಸ್ಯರಾದ ರೂಪೇಶ ಗೊಂಟಲ್, ನಾಗೇಶ ಕುಲ್ಕರ್ಣಿ, ದತ್ತಾ ಗೌಳಿ, ಅಸ್ಲಮ್, ಸೈಯದ್ ಅಕ್ಬರ್‌ಅಲಿ, ಅಮರ್ ಬೆಂಬಳಗೆ, ಶರಣಯ್ಯ ಸ್ವಾಮಿ, ಗುರುಲಿಂಗಯ್ಯ ಸ್ವಾಮಿ, ಶಿವರಾಜ ಮೆಕಾಲೆ, ನಬಿಸಾಬ್ ಶಾಹ, ದೀಪಕ ಸಾಯಬನೆ, ಕೈಲಾಶ ರಾಜೇಶ್ವರ, ಶಿವಕುಮಾರ ಮುಳೆ ಇದ್ದರು.

ರಾಮಲಿಂಗ್ ಪಾಟೀಲ್ ಸ್ವಾಗತಿಸಿದರು. ಪ್ರದೀಪ ಭುರಳೆ ಪ್ರಾಸ್ತಾವಿಕ ಮಾತನಾಡಿದರು. ವೀರಶೆಟ್ಟಿ ಪಾಟೀಲ್ ಕವನ ವಾಚನ ಮಾಡಿದರು. ಗಾಯಕ ರಾಹುಲ್ ತುತಾರೆ ನಿರೂಪಣೆ ಮಾಡಿ ಚಲನ ಚಿತ್ರ ಗಾಯಕ ಕಾರ್ಯಕ್ರಮ ನಡೆಸಿಕೊಟ್ಟರು. ಫೋಟೋಗ್ರಾಫರ್ ರೂಪೇಶ್ ಗೊಂಟಲ್ ಅವರಿಂದ ತರಬೇತಿ ಪಡೆದ 10 ಜನರಿಗೆ ಪ್ರಮಾಣ ಪತ್ರ ನೀಡಲಾಯಿತು.