ಜಿಲ್ಲೆ

ಛಾಯಾಗ್ರಾಹಕರ ಅಕಾಡೆಮಿ ಸ್ಥಾಪನೆಗೆ ಆಗ್ರಹ

ಬಾಗಲಕೋಟೆ.: ಕಲೆ ವಿಜ್ಞಾನ ಹಾಗೂ ವಾಣಿಜ್ಯ ಹೊಂದಿರುವ ಏಕೈಕ ಮೌಲ್ಯಗಳನ್ನು ಛಾಯಾಗ್ರಹಣ ಕಲೆ ಎಂದು ಬೆಂಗಳೂರಿನ ಖ್ಯಾತ ಛಾಯಾಗ್ರಾಹಕ ಸೂರ್ಯ ಪ್ರಕಾಶ ಹೇಳಿದರು.

ನಿವಾರ ಬಾಗಲಕೋಟೆ ನಗರದಲ್ಲಿ ಬಾಗಲಕೋಟೆ ತಾಲೂಕು ಫೋಟೋಗ್ರಾಫರ್ ಮತ್ತು ವಿಡಿಯೋ ಗ್ರಾಫರ್ ಸಂಘದ ವತಿಯಿಂದ ಆಯೋಜಿಸಿದ್ದ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಛಾಯಾಗ್ರಹಣವು ಒಂದು ಅದ್ಭುತ ಕಲೆಯಾಗಿದ್ದು ಎಲ್ಲರಿಗೂ ಒಲಿಯಲು ಅಸಾಧ್ಯ. ಇಂತಹ ಅದ್ಭುತ ಕಲೆಯನ್ನು ಹೊಂದಿರುವ ಛಾಯಾಗ್ರಾಹಕರನ್ನು ಸರ್ಕಾರ ಅಸಂಘಟಿತ ಕಾರ್ಮಿಕರೆಂದು ಗುರುತಿಸಿರುವುದು ವಿಪರ್ಯಾಸ.

ನಮಗೆ ಪ್ರತ್ಯೇಕ ಛಾಯಾಗ್ರಾಹಕರ ಅಕಾಡೆಮಿ ಸ್ಥಾಪನೆ ಆಗಬೇಕೆಂಬುದು ನಮ್ಮ ಆಶಯವಾಗಿದೆ. ಎಲ್ಲ ಛಾಯಾಗ್ರಹಕರು ಸಂಘಟತರಾಗಿ ಅಕಾಡೆಮಿ ಸ್ಥಾಪನೆಗೆ ಹೋರಾಡುವ ಅಗತ್ಯವಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ವೃತ್ತಿಪರ ಛಾಯಾಗ್ರಹಕರನ್ನು ನೇಮಿಸಿಕೊಳ್ಳಬೇಕು. ಕೇವಲ ಗುರುತಿನ ಚೀಟಿ ಹೊಂದಿದರೆ ಮಾತ್ರ ಛಾಯಾಗ್ರಹಕರು ಎನ್ನಲು ಸಾಧ್ಯವಿಲ್ಲ, ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಅಧಿಕೃತ ಕೋರ್ಸ್, ಮತ್ತು ತರಬೇತಿ ಪಡೆದರೆ ಮಾತ್ರ ವೃತ್ತಿಪರ ಛಾಯಾಗ್ರಹಕ. ಈ ನಿಟ್ಟಿನಲ್ಲಿ ಸಂಘಗಳು ಹೆಚ್ಚು ಹೆಚ್ಚು ತರಬೇತಿಗಳನ್ನು ಆಯೋಜಿಸಿ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಂಘಟನೆ ಅತ್ಯವಶ್ಯಕವಾಗಿದ್ದು ಎಲ್ಲರೂ ಒಟ್ಟಾಗಿ ಸಂಘಟನೆಗೆ ಹೆಚ್ಚು ಗಮನ ಹರಿಸಬೇಕು ಎಂದು ಕಿವಿ ಮಾತು ಹೇಳಿದರು.

ಜಿಲ್ಲಾಧ್ಯಕ್ಷ ವಿಠ್ಠಲ ಹಿರೇಮಠ ಮಾತನಾಡಿ ಛಾಯಾಗ್ರಹಕರನ್ನು ಸರ್ಕಾರವು ಕಾರ್ಮಿಕ ಇಲಾಖೆಯಲ್ಲಿ ಸೇರಿಸಿದ್ದು ಸ್ವಾಗತಾರ್ಹ. ನಾವೆಲ್ಲರೂ ಇನ್ನೂ ಹೆಚ್ಚು ಸಂಘಟಿತರಾದರೆ ಪ್ರತ್ಯೇಕ ಛಾಯಾಗ್ರಾಹಕರ ಅಕಾಡೆಮಿ ಸ್ಥಾಪನೆಗೆ ಹೋರಾಟ ಮಾಡಬಹುದು ಎಂದರು.

ತಾಲೂಕು ಅಧ್ಯಕ್ಷ ಚಂದ್ರು ಅಂಬಿಗೇರ ಮಾತನಾಡಿ ಛಾಯಾಗ್ರಹಣವು ಒಂದು ಅದ್ಭುತ ಕಲೆಯಾಗಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜಾನ್ಮೆಯಿಂದ, ಚತುರತೆಯಿಂದ ತಮ್ಮ ಕಲೆಯನ್ನು ಪ್ರದರ್ಶಿಸಿದರೆ ಯಶಸ್ಸು ಸಾಧಿಸಲು ಸಾಧ್ಯ, ಎಲ್ಲರೂ ಸಂಘದಲ್ಲಿ ಸದಸ್ಯತ್ವ ಪಡೆದುಕೊಳ್ಳಿ, ಸಂಘಟನೆಯಿಂದ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ವೃತ್ತಿಪರ ಛಾಯಾಗ್ರಹಕರು ತಪ್ಪದೆ ವಿಮಾ ಪಾಲಿಸಿಗಳನ್ನು ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಂದರ್ಭದಲ್ಲಿ ಸಂತೋಷ ಹಂಜಗಿ, ರಾಘು ಕಲಾಲ,ವಿರೇಶ ಹಿರೇಮಠ, ವಿಠ್ಠಲ ಮೂಲಿಮನಿ ಶಬ್ಬೀರ ಬಿಜಾಪುರ, ಸುರೇಶ ಮಜ್ಜಗಿ,ಶಿವು ನರಸೋಭಾ, ಹನಮಂತ ದಾಳಿ, ಸಂಗಮೇಶ ಅಂಬಿಗೇರ, ಕಾಶಿನಾಥ ಬಿಸನಾಳ, ಸದಾಶಿವ ಯತ್ನಟ್ಟಿ, ಸೇರಿದಂತೆ ತಾಲೂಕಿನ ಎಲ್ಲಾ ಛಾಯಾಗ್ರಹಕರು ಪಾಲ್ಗೊಂಡಿದ್ದರು.