ಬಾಗಲಕೋಟೆ ತಾಲೂಕಿನ ಐದು ಜನ ಹಿರಿಯ ಛಾಯಾಗ್ರಾಹಕ ಹಾಗೂ ವಿಡಿಯೋಗ್ರಾಫ್ ರಗಳಾದ ರಾಜು ಗೌಳಿ, ವಾಸು ಝಿಂಗಾಡೆ, ವಿವೇಕಾನಂದ ಗರಸಂಗಿ, ಮಹಾಂತೇಶ ಕಲಬಂಡಿ, ರುದ್ರಪ್ಪ ಮನಸಗಿ ಅವರನ್ನು ಬಾಗಲಕೋಟೆ ತಾಲೂಕು ಪೋಟೊಗ್ರಾಫರ್ ಹಾಗೂ ವಿಡಿಯೋಗ್ರಾಫರ್ ಸಂಘದಿಂದ ಸನ್ಮಾನಿಸಲಾಯಿತು.  
ಜಿಲ್ಲೆ

ಛಾಯಾಗ್ರಾಹಕ ಸಂಘದ ಕಟ್ಟಡ ನಿರ್ಮಾಣಕ್ಕೆ ಪ್ರಮಾಣಿಕ ಪ್ರಯತ್ನ

ಬಾಗಲಕೋಟೆ: ಛಾಯಾಗ್ರಹಣವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ಚಿತ್ರ, ದೃಶ್ಯ ರೂಪದಲ್ಲಿ ಕ್ಷಣಗಳು ಮತ್ತು ಭಾವನೆಗಳನ್ನು ಸೆರೆಹಿಡಿಯುತ್ತದೆ. ಅಂತ ಕಲಾಕೌಶಲವನ್ನು ರೂಢಿಸಿಕೊಂಡ ಛಾಯಾಗ್ರಾಹಕನ ಕಲೆ ಅದ್ಬುತ ಎಂದು ಶಾಸಕ ಎಚ್.ವೈ. ಮೇಟಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಏರ್ಪಡಿಸಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಛಾಗ್ರಹಣವು ಕಲೆಯ ಒಂದು ರೂಪವಾಗಿದ್ದು, ಸಮಯ, ಬೆಳಕು, ನೆನಪುಗಳು, ಭಾವನೆಗಳು, ಸಂಸ್ಕೃತಿ, ಇತಿಹಾಸ ಮತ್ತು ಹೆಚ್ಚಿನವುಗಳ ಸತ್ಯಾಸತ್ಯತೆಯನ್ನು ಸುಂದರವಾಗಿ ಸೆರೆಹಿಡಿಯುವ ಮೂಲಕ ನೆನಪುಗಳ ಕಥೆ ಹೇಳುವ ಅತ್ಯುತ್ತಮ ಮಾಧ್ಯಮವಾಗಿದೆ.

ಆಧುನಿಕ ತಂತ್ರಜ್ಞಾನದ ಹೊಸ ಹೊಸ ಕ್ಯಾಮೆರಾ ಬಳಕೆ ಮಾಡಿಕೊಂಡು ಛಾಯಾಗ್ರಾಹಕ ವೃತ್ತಿ ಮಾಡುತ್ತಿರುವವ ಶ್ರಮ ,ತಾಳ್ಮೆ ಅಗಾಧವಾದದ್ದು, ಬಾಗಲಕೋಟೆ ಜಿಲ್ಲೆಯ ಛಾಯಾಗ್ರಾಹಕ ಸಂಘದ ಕಟ್ಟಡ ನಿರ್ಮಾಣಕ್ಕೆ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ರಾಜು ನಾಯ್ಕರ ಮಾತನಾಡಿ, ಒಂದು ಚಿತ್ರ ಸಾವಿರ ಪದಗಳಿಗೆ ಸಮ.ಇಂತಹ ಛಾಯಾಚಿತ್ರಗ್ರಾಹಕರ ವಿಭಿನ್ನ ಆಲೋಚನೆ, ಕೌಶಲ್ಯ ,ತಾಳ್ಮೆಗೆ ಅವರಿಗೆ ಅವರೇ ಸಾಟಿ. ಅದ್ಬುತ ನೆನಪುಗಳ ರಾಶಿಗಳನ್ನು ತಮ್ಮ ಚಿತ್ರ,ದೃಶ್ಯಾವಳಿ ಮೂಲಕ ಕಣ್ಮುಂದೆ ತೆರೆದಿಡುತ್ತಾರೆ. ಇಂತಹ ಕ್ರಿಯಾಶೀಲ ಛಾಯಾಗ್ರಾಹಕರಿಗೆ ಬಾಗಲಕೋಟೆ ಜಿಲ್ಲೆಯಲ್ಲಿ ಆರ್ಟ್ ಗ್ಯಾಲರಿ ನಿರ್ಮಾಣ ಆಗಬೇಕು ಎಂದು ತಿಳಿಸಿದರು.ಯುವ ಮುಖಂಡ ಸಂತೋಷ ಹೊಕ್ರಾಣಿ ಮಾತನಾಡಿ, ಫೋಟೋಗ್ರಾಫರ್ ಇಲ್ಲದಿದ್ದರೆ ಒಂದು ಪತ್ರಿಕೆ, ಕಾರ್ಯಕ್ರಮ ಶೂನ್ಯವಾಗುತ್ತದೆ. ಕಾರ್ಯಕ್ರಮ ಹುರುಪು,ಹೊಳಪು,ನೆನಪು ತೆರೆದಿಡುವ ಕಾರ್ಯ ಮಾಡವ ಫೋಟೋಗ್ರಾಫರ್ ಕೌಶಲ್ಯ ಅಗಾಧ. ಇಂದಿನ ಆಧುನಿಕ ತಂತ್ರಜ್ಞಾನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ವೃತ್ತಿ ಭದ್ರತೆ ಇಲ್ಲ. ಅದು ಸಂಘಟನೆ ಮತ್ತು ಸರಕಾರದಿಂದ ಆಗಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬಾಗಲಕೋಟೆ ತಾಲೂಕು ಪೋಟೊಗ್ರಾಫರ್ ಹಾಗೂ ವಿಡಿಯೋಗ್ರಾಫರ್ ಸಂಘ ನೂತನ ಅಧ್ಯಕ್ಷ ಚಂದ್ರು ಅಂಬಿಗೇರ ,ಖಜಾಂಚಿ, ವೀರೇಶ ಹಿರೇಮಠ, ಸದ್ಯಸರಾದ ವಿಠ್ಠಲ ಮೂಲಿಮನಿ, ಸಂಗು ಅಂಬಿಗೇರ, ಶಬ್ಬೀರ ಬಿಜಾಪುರ, ಕಾಶಿನಾಥ, ಅವದೂತ, ಮಾಜಿ ತಾಲೂಕು ಅಧ್ಯಕ್ಷರಾದ ರಾಜು ಗವಳಿ, ಅಮರೇಶ ಗಚ್ಚಿನಮನಿ, ಅಬ್ದುಲ್‌ ಪಠಾಣ, ಜಗದೀಶ್ ಅಂಬಿಗೇರ, ಬೀಮು ಜಮಖಂಡಿ, ಮಂಜುನಾಥ ಗೊಡಪ್ಪನ್ನವರ, ರವಿಕಿರಣ್ ಬದಾಮಿ, ಮಹಮ್ಮದ್ ಚೌಧರಿ, ಹನುಮಂತ ಗಾಳಿ, ಲಕ್ಷ್ಮಣ ದಂಡಿನ, ಮೋಹನ್ ಚಪ್ಪಂಡ, ಸಿದ್ದು ಯತ್ನಟ್ಟಿ,ಸಂಘದ ಪ್ರಧಾನ ಕಾರ್ಯದರ್ಶಿ ರಾಘು ಕಲಾಲ ಛಾಯಾಗ್ರಹಕರು ಉಪಸ್ಥಿತರಿದ್ದರು.