ಜಿಲ್ಲೆ

ಛಾಯಾ ಗ್ರಾಹಕರಿಗೆ ಸಿಗಲಿ ಸರ್ಕಾರದ ಸೌಲಭ್ಯ

ರಮೇಶ ಮೇಳಕುಂದಾ

ಹುಲಸೂರು: ವಿವಿಧ ಕುಶಲ ಕಾರ್ಮಿಕರಿಗೆ ಸಿಗುವ ಸರ್ಕಾರದ ಸೌಲಭ್ಯಗಳು ಛಾಯಾಗ್ರಾಹಕರಿಗೂ ದೊರೆಯಬೇಕು ಎಂದು ಛಾಯಾ ಗ್ರಾಹಕರ ಸಂಘದ ತಾಲೂಕು ಅಧ್ಯಕ್ಷ ಅಂಜನಕುಮಾರ ಕಲ್ಯಾಣೆ ಆಗ್ರಹಿಸಿದರು. ಪಟ್ಟಣದಲ್ಲಿ ತಾಲೂಕು ಛಾಯಾ ಗ್ರಾಹಕರ ಸಂಘದಿAದ ಶನಿವಾರ ಆಯೋಜಿಸಿದ್ದ ಛಾಯಾ ಗ್ರಾಹಕರ ದಿನಾಚರಣೆಯಲ್ಲಿ ಮಾತನಾಡಿ, ದಿನೇ ದಿನೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದು, ಸಂಕಷ್ಟದ ಮಧ್ಯೆ ಜೀವನ ಸಾಗಿಸಬೇಕಾಗುತ್ತಿದೆ. ಸರ್ಕಾರ ನಮ್ಮನ್ನು ಗುರುತಿಸಿ, ಸೂಕ್ತ ಸೌಲಭ್ಯಗಳನ್ನು, ಬ್ಯಾಂಕ್‌ನಿAದ ಸರಳ ಸಾಲ ದೊರೆಯುವ ವ್ಯವಸ್ಥೆ ಮಾಡಬೇಕು ಎಂದರು. ಸಂಘದ ತಾಲೂಕು ಉಪಾಧ್ಯಕ್ಷ ಮಹೇಶ ಕಾಂಬಳೆ, ಕಾರ್ಯದರ್ಶಿ ರಾಜಕುಮಾರ, ಪ್ರಮುಖರಾದ ಪ್ರವೀಣ ಹಾರಕೂಡೆ, ಉಪೇಂದ್ರ ಗಿರಿ, ಮಹಾದೇವ ಸ್ವಾಮಿ, ಗಣೇಶ ಬಿರಾದಾರ, ವೀರೇಶ ವಡ್ಡೆ, ಮಕ್ಸೂದ್ ಶೇಖ್, ಸಂತೋಷ ಟಿಳೆ, ಪ್ರವೀಣ ಮೇಹರಾಜ್ ಇತರರಿದ್ದರು.