ಮಂಗಳೂರು: ಜಪ್ಪಿನಮೊಗರು ಕಡೆಕಾರಿನ ಹರ್ಬರ್ಟ್ ಡಿಸೋಜ ಕಳೆದ ಹನ್ನೆರಡು ವರ್ಷಗಳಿಂದ ಚೌತಿ ಹಬ್ಬಕ್ಕೆ ಉಚಿತವಾಗಿ ಭತ್ತದ ತೆನೆಯನ್ನು ನೀಡುವ ಕಾರ್ಯ ಮಾಡುತ್ತಿದ್ದಾರೆ.
ವಿಶೇಷ ಎಂದರೆ ಇವರು ಕ್ರೈಸ್ತರ ತೆನೆ ಹಬ್ಬಕ್ಕೆ ಎಂದು ಭತ್ತದ ಕೃಷಿ ಮಾಡಿ ಇದರ ತೆನೆ ಯನ್ನು ಜಿಲ್ಲೆಯ ಬಹುತೇಕ ಚರ್ಚ್ ಗಳಿಗೆ ನೀಡುವ ಕೆಲಸ ಮಾಡುತ್ತಿದ್ದರೂ ಇದರ ಅಸುಪಾಸಿನಲ್ಲಿ ಚೌತಿ ಹಬ್ಬ ಕೂಡ ಬರುತ್ತಿತ್ತು. ಈ ಸಮಯದಲ್ಲಿ ದೇವಳಗಳು ತೆನೆಗೆ ಬೇಡಿಕೆ ಇಡುತ್ತಿದ್ದರು.
ಈ ಬಾರಿ ಜಿಲ್ಲೆಯ ಇಪ್ಪತ್ತಕ್ಕೂ ಅಧಿಕ ದೇವಸ್ಥಾನ ಗಳಿಗೆ ಹರ್ಬಟ್ ಡಿಸೋಜ ಅವರ ಭತ್ತದ ಗದ್ದೆಯ ತೆನೆಯನ್ನು ಬಳಸಿಕೊಳ್ಳಲಾಗುತ್ತದೆ. ಅವರು ಗದ್ದೆ ಯಿಂದ ಎಂದಿಗೂ ಭತ್ತವನ್ನು ಮನೆಗೆ ಸಾಗಿಸುವ ಕಾರ್ಯ ಮಾಡಿಲ್ಲವಂತೆ ಎಲ್ಲವೂ ದೇವಸ್ಥಾನ ಹಾಗೂ ಚರ್ಚ್ ಗಳಿಗೆ ದಾನ ಕೊಡುವುದು ಅವರ ಸಂಪ್ರದಾಯ.
ಈಗ ಗದ್ದೆ ಯ ಪ್ರಮಾಣ ಕಡಿಮೆಯಾಗಿದೆ. ಬರೀ ನಲವತ್ತು ಸೆಂಟ್ಸ್ ಜಾಗದಲ್ಲಿ ಈಗ ಭತ್ತದ ಕೃಷಿ ಮಾಡಿದ್ದಾರೆ. ಕರಾವಳಿಯ ಮಣ್ಣಿನ ಗುಣವೇ ಅಂತದ್ದು ಮಾರಾಯ್ರೆ. ಇಲ್ಲಿ ಧಾರ್ಮಿಕ ಸಾಮರಸ್ಯ ವಿದೆ .
ಆದರೆ ಒಪ್ಪಿಕೊಂಡು ಹೋಗುವ ಮನಸ್ಸು ಕಡಿಮೆಯಾಗುತ್ತಿದೆ ಎನ್ನುತ್ತಾರೆ ಕೆಲವರು.