ಜಿಲ್ಲೆ

ಚೌತಿ ದಿನವೂ ಉತ್ತಮ ಮಳೆ ಸಂಭವ

ಕಾರವಾರ: ಗಣೇಶ ಚತುರ್ಥಿಯ ದಿನವೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆ.22 ರಂದು ಜಿಲ್ಲೆಯಲ್ಲಿ ಸರಾಸರಿ 64.5 ರಿಂದ 115.5 ಮಿಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು ಯಲ್ಲೊ ಅಲರ್ಟ್ ನೀಡಿದೆ.

ಶುಕ್ರವಾರ ಬೆಳಗಿನ ವರದಿಯಂತೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಅಂಕೋಲಾದಲ್ಲಿ 50.6, ಭಟ್ಕಳ- 51.4, ಹಳಿಯಾಳ- 28.8, ಹೊನ್ನಾವರ- 92.6, ಕಾರವಾರ- 36.7, ಕುಮಟಾ-32.2, ಮುಂಡಗೋಡ- 9.8, ಸಿದ್ದಾಪುರ- 43.6, ಶಿರಸಿ-42.5, ಜೊಯಿಡಾ- 33.8, ಯಲ್ಲಾಪುರದಲ್ಲಿ 31.2 ಮಿಮೀ ಮಳೆಯಾಗಿದೆ.

ಕದ್ರಾ ಜಲಾಶಯಕ್ಕೆ 16501 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ನೀರನ್ನು ಹೊರ ಬಿಡಲಾಗುತ್ತಿದೆ. ಸೂಪಾಕ್ಕೆ 17267 ಕ್ಯೂಸೆಕ್ ನೀರು ಹರಿದು ಬರುತ್ತಿದೆ.