ಬೇಲೂರು : ಶರನ್ನವರಾತ್ರಿ ಅಂಗವಾಗಿ ಚೌಡೇಶ್ವರಿ ಅಮ್ಮನವರ ಪಟ್ಟಾಭಿಷೇಕ ನೆರವೇರಿಸಿದ ನಂತರದ ಗುರುವಾರದ ನಾಲ್ಕನೇ ದಿನ ವಿಶೇಷ ಪೂಜೆಯನ್ನು ಮಹಾ ಮಂಗಳಾರತಿಯೊಂದಿಗೆ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಶರನ್ನವರಾತ್ರಿ ಅಂಗವಾಗಿ ಬೇಲೂರು ಪಟ್ಟಣದ ದೇವಾಗ ಬೀದಿಯಲ್ಲಿರುವ ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಸೆ.26 ರಿಂದ ಅ.5 ರವರೆಗೆ ಪ್ರತಿನಿತ್ಯ ಅಮ್ಮನವರಿಗೆ ವಿವಿಧ ಅಲಂಕಾರದೊಂದಿಗೆ ಭಕ್ತರ ಸಮ್ಮುಖದಲ್ಲಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುತ್ತಿದೆ.
ಅಲ್ಲದೆ ದಿನನಿತ್ಯ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಶರನ್ನವರಾತ್ರಿ ಮುಗಿಯುವವರೆಗೂ ದೇವಸ್ಥಾನದ ವತಿಯಿಂದ ಪ್ರಸಾದ ವಿತರಣೆ ನೆರವೇರಲಿದೆ ಎಂದು ದೇವಾಂಗ ಸಂಘದ ಮುಖಂಡ ಗಿರಿಯಪ್ಪಶೆಟ್ಟಿ ತಿಳಿಸಿದರು.