ಕಿಕ್ಕೇರಿ: ಹೋಬಳಿಯ ಚೌಡೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೃಷ್ಣಾಪುರ ಗ್ರಾಮದ ಅಂಬುಜಾ ಗಿರೀಗೌಡ, ಉಪಾಧ್ಯಕ್ಷರಾಗಿ ಸಿದ್ದಾಪುರ ಸೋಮಶೇಖರ್ ಅವಿರೋಧ ಆಯ್ಕೆಯಾದರು.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಂಬುಜಾ ಗಿರೀಗೌಡ, ಸಿದ್ದಾಪುರ ಸೋಮಶೇಖರ್ ಬಿಟ್ಟು ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯೂ ಆದ ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಸತೀಶ್ ಅವಿರೋಧ ಆಯ್ಕೆ ಘೋಷಿಸಿದರು.
ಸದಸ್ಯರಾದ ರಘು, ದೇವರಾಜು, ರವಿ, ರಮೇಶ್, ಪ್ರದೀಪ್, ಶ್ರೀಶೈಲ, ಹೇಮಾವತಿ, ಲಕ್ಷ್ಮಮ್ಮ, ವಿನೋದಾ, ಚೈತ್ರಾ, ರಾಧಾಮಣಿ, ನಂಜಾಮಣಿ, ಮುಖಂಡರಾದ ಹರೀಶ್, ಕುಮಾರ್, ಕಾಳೇಗೌಡ, ಪುಟ್ಟರಾಜು, ಹರೀಶ್, ಗಿರೀಗೌಡ ಹಾಜರಿದ್ದರು.