ಕೋಲಾರ: ದಕ್ಷಿಣ ಭಾರತದ ಪ್ರಥಮ ಬೆಂಗಳೂರು * ಚೆನ್ನೆöÊ ಕಾರಿಡಾರ್ ಎಕ್ಸ್ಪ್ರೆಸ್ ವೇ ಕಾಮಗಾರಿ ಭರದಿಂದ ಸಾಗಿರುವ ಬೆನ್ನಲ್ಲೇ ಮತ್ತೊಂದು ಮಹತ್ವಾಂಕಾಕ್ಷಿ ಚೆನ್ನೆöÊ * ಬೆಂಗಳೂರು * ಮೈಸೂರು(ಚಿಬಿಎಂ) ಬುಲೆಟ್ ಟ್ರೆöÊನ್ ಯೋಜನೆ ಆರಂಭಕ್ಕೆ ಕೇಂದ್ರ ಸರ್ಕಾರ ಸದ್ದಿಲ್ಲದೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಮುಂದಿನ ವರ್ಷ ಮಾರ್ಚ್ಗೆ ಕೋಲಾರ ಜಿಲ್ಲೆಯಲ್ಲಿ ಸಾಗುವ ಬೆಂಗಳೂರು- ಚೆನ್ನೆöÊ ಕಾರಿಡಾರ್ ಎಕ್ಸ್ಪ್ರೆಸ್ ವೇ ಪೂರ್ಣಗೊಳ್ಳಲಿದ್ದು, ಈ ಹೆದ್ದಾರಿ ಆಸುಪಾಸಿನಲ್ಲೆ ಸಾಗುವ ಬುಲೆಟ್ ಟ್ರೆöÊನ್ ಯೋಜನೆಗೆ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಮಾರ್ಗ ನಿರ್ಮಾಣಕ್ಕೆ ಪೂರಕವಾದ ಸರ್ವೇ, ವೈಮಾನಿಕ ಸಮೀಕ್ಷೆ, ಯೋಜನಾ ವರದಿ ಸೇರಿದಂತೆ ಇತರೆ ಪೂರ್ವಪರ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ.
ಮೈಸೂರು * ಬೆಂಗಳೂರು * ಚೆನ್ನೆöÊವರೆಗೆ ೪೩೫ಕಿಮೀ ಉದ್ದದ ನೂತನ ಮಾರ್ಗ ನಿರ್ಮಾಣವಾಗಬೇಕಿದ್ದು, ಮೊದಲ ಹಂತದಲ್ಲಿ ಉಪಗ್ರಹ ಸರ್ವೇ ಮಾಡಲಾಗಿದ್ದು, ಸರ್ವೇ, ನಕ್ಷೆ, ಅಂದಾಜು ಪಟ್ಟಿ ತಯಾರಿಕೆಯ ಹೊಣೆಯನ್ನು ಹೈದರಾಬಾದ್ ಮೂಲದ ಎಎಆರ್‌ವಿಇಇ ಅಸೋಸಿಏಟ್ಸ್ ಹೊತ್ತಿದ್ದು, ಚೆನ್ನೆöÊ ಕಡೆಯಿಂದ ಕೋಲಾರದ ತನಕ ಸರ್ವೇ ಸರ್ವೇ ಕಾರ್ಯ ನಡೆಸಿದೆ.
ಕೋಲಾರ ಸಮೀಪದ ಶೆಟ್ಟಿಗಾನಹಳ್ಳಿ * ಕೋರಗಂಡಹಳ್ಳಿ ಮಾರ್ಗದಲ್ಲಿ ಭಾನುವಾರ ಎಎಆರ್‌ವಿಇಇ ಸಂಸ್ಥೆಯ ಸರ್ವೇರ‍್ಸ್, ಇಂಜಿನಿರ‍್ಸ್ ಮತ್ತು ಸಿಬ್ಬಂದಿ ಮಾರ್ಗಕ್ಕೆ ಅಗತ್ಯವಾಗಿರುವ ೧ನೂರು ಮೀಟರ್ ಅಗಲದ ಜಾಗಕ್ಕೆ ಎರಡೂ ಬದಿಯಲ್ಲಿ ಗುರುತು ಮಾಡಿ, ಕ್ರಮಸಂಖ್ಯೆ ಹಾಕಿ ವೈಮಾನಿಕ ಸಮೀಕ್ಷೆಗೆ ಅನುಕೂಲವಾಗುವಂತೆ ಪ್ರತ್ಯೇಕ ಸಂಖ್ಯೆಗಳನ್ನೊಳಗೊಂಡ ಕೋಡ್‌ನ್ನು ಸಿಮೆಂಟ್, ಜಲ್ಲಿಕಲ್ಲಿನ ಮಿಶ್ರಣದ ಬ್ಲಾಕ್ ನಿರ್ಮಿಸಿದರು.
ಸರ್ವೇ ತಂಡ ಕಂಡು ಸುತ್ತಲಿನ ಗ್ರಾಮಸ್ಥರು, ಮಾರ್ಗದಲ್ಲಿ ಸಂಚರಿಸುತ್ತಿದ್ದವರು ಕುತೂಹಲದಿಂದ ಇದು ಯಾವ ಸರ್ವೇ? ನೀವು ಯಾರು? ನಮ್ಮ ಜಮೀನುಗಳು ಹೋಗುತ್ತವೆಯೇ? ಪರಿಹಾರ ಹೇಗೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳುತ್ತಿದ್ದರು.
ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಈ ಯೋಜನೆ ಕೋಲಾರ * ಬಂಗಾರಪೇಟೆ ಮಧ್ಯೆ ನಿಲ್ದಾಣ ಹೊಂದಿರಲಿದ್ದು, ವಕ್ಕಲೇರಿ, ಮಾಲೂರು, ಬೆಂಗಳೂರು ಹೊರವಲಯದಲ್ಲಿ ಕೆಂಗೇರಿ, ಮಂಡ್ಯ, ಚನ್ನಪಟ್ಟಣದ ಮೂಲಕ ಮೈಸೂರಿಗೆ ಸಂಪರ್ಕ ಕಲ್ಪಿಸಲಿದೆ.
ಗಂಟೆಗೆ ಗರಿಷ್ಟ ೩೫೦ಕಿಮೀ ಅಥವಾ ಸರಾಸರಿ ೨೫೦ಕಿಮೀ ವೇಗದಲ್ಲಿ ಬುಲೆಟ್ ಟ್ರೆöÊನ್ ಸಂಚರಿಸಲಿದ್ದು, ಮೈಸೂರಿನಿಂದ ಚೆನ್ನೆöÊ ಕೇವಲ ೨.೩೦ಗಂಟೆಯಲ್ಲಿ ತಲುಪಬಹುದಾಗಿದೆ. ಪ್ರಸ್ತುತ ಬೆಂಗಳೂರು * ಚೆನ್ನೆöÊ ಮಾರ್ಗದಲ್ಲಿ ಸಂಚರಿಸುತ್ತಿರುವ ಶತಾಬ್ಧಿ, ಬೃಂದಾವನ, ಲಾಲ್‌ಬಾಗ್ ಮತ್ತಿತರ ಸೂಪರ್‌ಫಾಸ್ಟ್ ಎಕ್ಸ್ಪ್ರೆಸ್‌ಗಳು ಇವೆರಡು ನಗರಗಳನ್ನು ತಲುಪಲು ಕನಿಷ್ಠ ೫ರಿಂದ ೬ಗಂಟೆ ಕಾಲಾವಕಾಶ ಪಡೆದುಕೊಳ್ಳುತ್ತಿವೆ. ಬುಲೆಟ್ ಟ್ರೆöÊನ್ ಸಂಚರಿಸಿದರೆ ವಿಮಾನ ವೇಗಕ್ಕಿಂತ ಸ್ವಲ್ಪ ಕಡಿಮೆ ಅವಧಿಯಲ್ಲಿ ಸಂಚರಿಸಬಹುದಾಗಿದೆ. ಸುರಕ್ಷಿತ ಮತ್ತು ಸಮಯ ಉಳಿಕೆ ದೃಷ್ಟಿಯಿಂದ ಬುಲೆಟ್ ಟ್ರೆöÊನ್ ಅನುಕೂಲವಾಗಲಿದೆ.
ಬುಲೆಟ್ ಟ್ರೆöÊನ್ ಮಾರ್ಗದಲ್ಲಿ ೯ ನಿಲ್ದಾಣ ಸ್ಥಾಪನೆಯಾಗಲಿದ್ದು, ಈ ಭಾಗದಲ್ಲಿ ಪ್ರಮುಖ ಹೆದ್ದಾರಿಗಳೊಂದಿಗೆ ನಿಲ್ದಾಣಗಳಿಗೆ ರಸ್ತೆ ಮಾರ್ಗ ಸಂಪರ್ಕ ಹೊಂದುವ ಉದ್ದೇಶ ಯೋಜನೆಯಲ್ಲಿ ಪ್ರಸ್ತಾಪವಾಗಲಿದೆ. ಚೆನ್ನೆöÊ ಹೊರವಲಯದ ಪೂನಾಮಲ್ಲೆöÊ, ಆರ್ಕೋಣಂ, ಚಿತ್ತೂರು, ಬಂಗಾರಪೇಟೆ, ಬೆಂಗಳೂರು, ಚನ್ನಪಟ್ಟಣ, ಮಂಡ್ಯ, ಮಂಡ್ಯ, ಮೈಸೂರು ನಿಲ್ದಾಣಗಳು ಮಾತ್ರ ಮಾರ್ಗದಲ್ಲಿ ನಿರ್ಮಾಣವಾಗಲಿವೆ.