ಯಾದಗಿರಿ: ಯಾವುದೇ ಜಾತಿ, ಪಂಥಕ್ಕೆ ಸೀಮಿತಗೊಳ್ಳದೆ, ಸರ್ವಸಮನ್ವಯದ ಕವಿಯೆಂದೇ ಗುರುತಿಸಿಕೊಂಡಿದ್ದ ದಿ.ಚೆನ್ನವೀರ ಕಣವಿಗೆ ಸಕರ್ಾರ ಮರಣೋತ್ತರ ರಾಷ್ಟ್ರಕವಿ ಎಂದು ಘೋಷಿಸಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ ಒತ್ತಾಯಿಸಿದರು.
ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡ ಚೆಂಬೆಳಕಿನ ಕವಿ ಕಣವಿ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಡಾ.ಜಿ.ಎಸ್.ಶಿವರುದ್ರಪ್ಪ ನಂತರ ಯಾರನ್ನೂ ರಾಷ್ಟ್ರಕವಿ ಎಂದು ಘೊಷಿಸಿಲ್ಲ. ಅವರ ಸಮಕಾಲೀನರಾಗಿದ್ದ, ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ ಹಾಗೂ ಯಾವುದೇ ವಿವಾದಗಳಿಗೆ ಆಸ್ಪದ ನೀಡದೆ ಶುದ್ಧ ಸಾಹಿತ್ಯದ ಕೃಷಿ ಮಾಡಿದ ಚೆನ್ನವೀರ ಕಣವಿ ಅವರು ರಾಷ್ಟ್ರಕವಿ ಗೌರವಕ್ಕೆ ಅತ್ಯಂತ ಅರ್ಹ ಚೇತನರಾಗಿದ್ದಾರೆ ಎಂದು ಪ್ರತಿಪಾದಿಸಿದರು.
ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ ಮಾತನಾಡಿ, ಈ ಶತಮಾನ ಕಂಡ ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಕಣವಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಕನರ್ಾಟಕ ವಿವಿಯಲ್ಲಿ ಪ್ರಸಾರಾಂಗ ಕಾರ್ಯದರ್ಶಿ , ನಿರ್ದೇಶಕರಾಗಿ ಅತ್ಯುತ್ತಮ ಸೇವೆ ಸಲ್ಲಿಸುವ ಜತೆಗೆ ಅಚ್ಚಳಿಯದಂಥ ಸಾಹಿತ್ಯ ರಚನೆ ಮಾಡಿ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಸಾಹಿತಿ ವಿಶ್ವನಾಥರೆಡ್ಡಿ ಗೊಂದೆಡಿಗಿ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ, ಆರ್.ಮಹಾದೇವಪ್ಪಗೌಡ ಅಬ್ಬೆತುಮಕೂರ, ಚನ್ನಪ್ಪ ಸಾಹು ಠಾಣಗುಂದಿ, ನೂರಂದಪ್ಪ ಲೇವಡಿ, ಅಯ್ಯಣ್ಣ ಹುಂಡೇಕಾರ, ಸ್ವಾಮಿದೇವ ದಾಸನಕೇರಿ, ಶ್ರೀಶೈಲ ಪೂಜಾರಿ, ಬಸವಂತರಾಯಗೌಡ ಮಾಲಿಪಾಟೀಲ, ಚಂದ್ರಶೇಖರ ಅರಳಿ, ವೀರಭದ್ರಯ್ಯ ಸ್ವಾಮಿ ಜಾಕಾ ಮಠ, ಮಹೇಶ ಹಿರೇಮಠ, ಸಿದ್ದಣ್ಣ ಬಾಡದ, ಲಕ್ಷ್ಮೀನಾರಾಯಣ ಗುಂಡಾನೋರ, ನಾಗಪ್ಪ ಸಜ್ಜನ, ಮಲ್ಲಿಕಾಜರ್ುನ ಹಳ್ಳಿಕಟ್ಟಿ, ದೇವರಾಜ ವರ್ಕನಳ್ಳಿ ಇದ್ದರು. ಡಾ. ಸಿದ್ಧರಾಜರೆಡ್ಡಿ ವಂದಿಸಿದರು