ಜಿಲ್ಲೆ

ಚುನಾವಣೆ ಮಾಹಿತಿ ವೆಬ್‌ನಲ್ಲಿ ಲಭ್ಯ

ಬಾಗಲಕೋಟೆ: ಚುನಾವಣೆಗೆ ಸಂಬAಽಸಿದ ಮತದಾರರ ಪಟ್ಟಿ ಮತ್ತು ಇತರೆ ಚುನಾವಣಾ ಮಾಹಿತಿಗಳನ್ನು ಭಾರತ ಚುನಾವಣಾ ಆಯೋಗ, ಮುಖ್ಯ ಚುನಾವಣಾಽಕಾರಿಗಳು ಹಾಗೂ ಜಿಲ್ಲಾ ಚುನಾವಣಾಽಕಾರಿಗಳ ವೆಬ್‌ಸೈಟ್‌ನಲ್ಲಿ ಕಾಲ ಕಾಲಕ್ಕೆ ಪ್ರಕಟಿಸಲಾಗುತ್ತಿದ್ದು, ವೆಬ್‌ಸೈಟ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಽಕಾರಿ ಆಗಿರುವ ಜಿಲ್ಲಾ ಚುನಾವಣಾಽಕಾರಿ ಜಾನಕಿ ಕೆ.ಎಂ ಹೇಳಿದರು.

ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಽಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣೆ ಸಂಬAಽಸಿದ ಪ್ರತಿಯೊಂದು ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ವೀಕ್ಷಣೆ ಮಾಡಬಹುದಾಗಿದೆ. ಚುನಾವಣಾ ಆಯೋಗವು ಜನಪ್ರಾತಿನಿಧ್ಯ ಕಾಯ್ದೆ ೧೯೫೦, ೧೯೫೧, ದಿ ರೆಜಿಸ್ಟೆçÃಷನ್ ಆಪ್ ಎಲೆಕ್ಟರ ರೂಲ್ಸ್ ೧೯೬೦, ದಿ ಕಂಡಕ್ಟ ಆಪ್ ಎಲೆಕ್ಷನ್ ರೂಲ್ಸ್ ೧೯೬೧ ಹಾಗೂ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಚುನಾವಣಾ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ ಎಂದರು.

ಇದೇ ಏಪ್ರೀಲ್ ೧, ಜುಲೈ ೧, ಆಗಸ್ಟ ೧ ಹಾಗೂ ಅಕ್ಟೋಬರ ೧ ಅರ್ಹತಾ ದಿನಾಂಕವನ್ನು ಆಧರಿಸಿ ೧೮ ವರ್ಷ ತುಂಬುವ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮುಂಗಡ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಇದರಿಂದ ೧೮ ವರ್ಷ ಪೂರೈಸಿದ ಯುವಕರು ನೋಂದಣಿಗಾಗಿ ಮುಂದಿನ ವರ್ಷದ ವಿಶೇಷ ಪರಿಷ್ಕರಣೆವರೆಗೆ ಕಾಯುವದನ್ನು ತಪ್ಪಿಸಲಾಗಿದೆ. ಮಧ್ಯಂತರ ಅವಽಯಲ್ಲಿ ನಡೆಯುವ ಚುನಾವಣೆಗಳಲ್ಲಿ ಮತ ಚಲಾವಣೆಗೆ ಅವಕಾಶ ದೊರೆಯಲಿದ್ದು, ಯುವ ಮತದಾರರ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು, ಬೂತ್ ಲೆವೆಲ್ ಏಜೆಂಟರಗಳನ್ನು ನೇಮಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಸದರಿ ಬೂತ್ ಲೆವೆಲ್ ಏಜೆಂಟರಗಳು ಸಂಬAಧಪಟ್ಟ ಮತಗಟ್ಟೆ ಹಂತದ ಅಽಕಾರಿಗೆ ಪ್ರತಿ ದಿನ ೧೦ ನಮೂನೆಗಳನ್ನು ನಿರಂತರ ಪರಿಷ್ಕರಣೆಯಲ್ಲಿ ಸಲ್ಲಿಸಲು ಅವಕಾಶವಿದೆ. ಬೂತ್ ಲೆವೆಲ್ ಏಜೆಂಟರುಗಳ ನಮೂನೆಗಳ ಅರ್ಜಿ ಸಹಿತ ಅರ್ಜಿಗಳನ್ನು ಸ್ವತಃ ಪರಿಶೀಲನೆ ಮಾಡಿರುವುದಾಗಿ ದೃಢೀಕರಣ ಸಲ್ಲಿಸತಕ್ಕದ್ದು. ಯುವ ಮತದಾರರನ್ನು ಹೆಚ್ಚಾಗಿ ನೋಂದಾಯಿಸಲು ರಾಜಕೀಯ ಪಕ್ಷದ ಮುಖಂಡರು ಮತಗಟ್ಟೆ ಮಟ್ಟದ ಅಽಕಾರಿಗಳೊಂದಿಗೆ ಸಹಕರಿಸಿ ಪ್ರಗತಿ ಸಾಽಸಲು ಹೇಳಿದರು.

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರುಗಳ ಸೇರ್ಪಡೆ, ತಿದ್ದುಪಡಿ, ತೆಗೆದು ಹಾಕಲು, ವರ್ಗಾವಣೆಗಾಗಿ ದಾಖಲೆಗಳೊಂದಿಗೆ ನಿಗಽತ ನಮೂನೆಗಳಲ್ಲಿ ಎಲ್ಲ ಮತಗಟ್ಟೆಗಳ ಬಿಎಲ್‌ಒಗಳಿಗೆ, ಮತದಾರ ನೋಂದಣಾಽಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಽಕಾರಿಗಳ ಕಚೇರಿಗಳಿಗೆ ಹಾಗೂ ವಿಎಸ್‌ಪಿ, ಓಟರ್ ಹೆಲ್ಪಲೈನ್ ಮೊಬೈಲ್ ಆಪ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮತದಾರರ ಸಹಾಯವಾಣಿ ೧೯೫೦ಗೆ ಸಂಪರ್ಕಿಸಬಹುದಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಽಕಾರಿ ಪರಶುರಾಮ ಶಿನ್ನಾಳಕರ, ಚುನಾವಣಾ ವಿಭಾಗದ ಶಿರಸ್ತೇದಾರ ಮಹೇಶ ಪಾಂಡವ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಶ್ರೀನಿವಾಸ ಬಳ್ಳಾರಿ, ಯಮನಪ್ಪ ಶಿರೂರ, ಮಲ್ಲಿಕಾರ್ಜುನ ಕಾಂಬಳೆ, ಆನಂದ ದೇವಾಡಿಗ, ಕೃಷ್ಣಾ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.