ಚಿತ್ರದುರ್ಗ: ಮತದಾನ ಎಂಬುದು ಸಂವಿಧಾನ ನಮಗೆ ನೀಡಿರುವ ಹಕ್ಕು. ಚುನಾವಣೆಗಳಲ್ಲಿ ಈ ಹಕ್ಕನ್ನು ತಪ್ಪದೇ ಚಲಾಯಿಸೋಣ, ಇದು ನಮ್ಮ ಕರ್ತವ್ಯ ಕೂಡ ಹೌದು ಎಂದು ಪ್ರಾಂಶುಪಾಲ ಆರ್.ರಮೇಶ್ ಹೇಳಿದರು.
ತಾಲೂಕಿನ ಬೊಮ್ಮೆನಳ್ಳಿ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಚುನಾವಣಾ ಸಾಕ್ಷರತೆಗಾಗಿ ಶನಿವಾರ ಆಯೋಜಿಸಿದ್ದ ಶಾಲಾ ಸಂಸತ್ ಕಲ್ಪಿತ ಚುನಾವಣೆಯ ಮತದಾನದ ಸಂದರ್ಭದಲ್ಲಿ ಮಾತನಾಡಿ, ಚುನಾವಣೆ ಎಂಬುದು ಭಾರತದ ಪ್ರಜಾಪ್ರಭುತ್ವದ ಹಬ್ಬವಾಗಿದೆ ಎಂದರು. ವಸತಿ ಶಾಲೆಯ ನಿಲಯ ಪಾಲಕ ಮನೋಜ್‌ಹರನಾಳ್, ಶಿಕ್ಷಕ ಪ್ರಕಾಶ್ ಮತ್ತಿತರರು ಇದ್ದರು.