ಜಿಲ್ಲೆ

ಚುಟುಕು ಸಾಹಿತ್ಯದಿಂದ ಶರಣ ತತ್ವ ಪ್ರಸಾರ, ಶಿರಕೋಳ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ ಅಭಿಮತ, 11ನೇ ಚುಟುಕು ಸಾಹಿತ್ಯ ಸಮ್ಮೇಳನ

ಹುಬ್ಬಳ್ಳಿ: ಶರಣರ ತತ್ವ ಸಿದ್ಧಾಂತಗಳನ್ನು ಸರಳವಾಗಿ ಜನಮನ ತಲುಪಿಸುವಲ್ಲಿ ಚುಟುಕು ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ ಎಂದು ಶಿರಕೋಳ ಹಿರೇಮಠದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿಯ ವಿದ್ಯಾನಗರ ಕನಕದಾಸ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಧಾರವಾಡ ಜಿಲ್ಲಾ 11ನೇ ಚುಟುಕು ಸಾಹಿತ್ಯ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅನುಭವ ಮಂಟಪದ ಸಾಹಿತ್ಯ ಪರಂಪರೆಯನ್ನು ಇಂದು ಕಚುಸಾಪ ಪಾಲಿಸಿಕೊಂಡು ಬಂದಿದೆ. ಅಲ್ಪ ಸಮಯದಲ್ಲಿ ಇದು ರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ. ಸರ್ಕಾರದ ಯಾವುದೇ ನೆರವು ಇಲ್ಲದೇ ಸಾಹಿತಿಗಳ ಮತ್ತು ಸಾಹಿತ್ಯಾಸಕ್ತರ ಪ್ರೀತಿ ವಿಶ್ವಾಸ ಗಳಿಸುವ ಕೆಲಸದಲ್ಲಿ ನಿರಂತರ ತೊಡಗಿಕೊಂಡಿದೆ ಎಂದು ಮೆಚ್ಚುಗೆ ಸೂಚಿಸಿದರು.

ಸುಳ್ಳದ ಪಂಚಗೃಹ ಹಿರೇಮಠದ ಶಿವ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಾಹಿತ್ಯ ಚಟುವಟಿಕೆಗಳು ಜನಮನವನ್ನು ತಿಳಿಗೊಳಿಸಿ ಏಕತೆಯ ಭಾವ ಬಿತ್ತುವ ಕಾರ್ಯ ಮಾಡಬೇಕೆಂದು ಹೇಳಿದರು.

ಕನಕದಾಸ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಲ ಅವರು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ನಿಕಟಪೂರ್ವ ಸಮೆ್ಮೕಳನ ಸರ್ವಾಧ್ಯಕ್ಷೆ ಪದ್ಮಾ ದೇಸಾಯಿ ಅವರು ಈಗಿನ ಸರ್ವಾಧ್ಯಕ್ಷ ವಿ.ಜಿ. ಪಾಟೀಲರಿಗೆ ಕನ್ನಡ ಶಾಲು ಹೊದಿಸಿ ಶುಭ ಕೋರಿದರು.

ಸ್ವಾಗತ ಸಮಿತಿ ಉಪಾಧ್ಯಕ್ಷ ಜಿ.ವಿ. ಹಿರೇಮಠ ಅಭಿನಂದನಾ ಭಾಷಣ ಮಾಡಿದರು. ಜ್ಯೋತಿ ದೊಡ್ಡಲಿಂಗಣ್ಣವರ ಕನ್ನಡಗೀತೆ ಹಾಡಿದರು. ಜಿಲ್ಲಾಧ್ಯಕ್ಷ ಡಾ. ಎಚ್.ವಿ. ಬೆಳಗಲಿ ಸ್ವಾಗತಿಸಿದರು. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು.

ಸಮ್ಮೇಳನ ಸರ್ವಾಧ್ಯಕ್ಷ ವಿ.ಜಿ. ಪಾಟೀಲ ಅವರಿಗೆ ‘ಅಮೃತ ಸಮ್ಮಾನ’, ಚನ್ನಬಸಪ್ಪ ಧಾರವಾಡಶೆಟ್ರ ಅವರಿಗೆ ‘ದಶಮಾನೋತ್ಸವ ಸಂಭ್ರಮ’ ಮಹಿಳಾ ದಿನಾಚರಣೆ ಅಂಗವಾಗಿ ಪದ್ಮಾ ದೇಸಾಯಿ ಹುಬ್ಬಳ್ಳಿ. ರಾಧಾಬಾಯಿ ಕೃಷ್ಣ ಶಿರಾಲಿ ಮುಂಡಗೋಡ, ಮಂಜುಳಾ ನಾಮದೇವ ರಾಣೆಬೆನ್ನೂರು, ಮಧುಮತಿ ಸಣಕಲ್ಲ ಧಾರವಾಡ ಮತ್ತು ಮರಣೋತ್ತರವಾಗಿ ಪ್ರೊ. ವಿಶಾಲಾಕ್ಷಿ ದೇಶಪಾಂಡೆ ಅವರ ಚುಟುಕು ಚೇತನ ಪ್ರಶಸ್ತಿಯನ್ನು ಅವರ ಸಹೋದರಿ ಕುಮುದಾ ದೇಶಪಾಂಡೆ ಅವರಿಗೆ ನೀಡಿ ಗೌರವಿಸಲಾಯಿತು.

ಹಿರಿಯ ಜಾನಪದ ತಜ್ಞ ಡಾ. ರಾಮು ಮೂಲಗಿ ಹಾಗೂ ಹಿರಿಯ ಚಿಂತಕಿ ಸಂಧ್ಯಾ ದೀಕ್ಷಿತ ಅವರು ಮಾತನಾಡಿದರು. ಡಾ. ಎಂ.ಎಸ್. ಹುಲೊ್ಲೕಳಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಿತು. ಡಾ. ಎಚ್.ವಿ. ಬೆಳಗಲಿ ಆಶಯ ಭಾಷಣ ಮಾಡಿದರು.

ಮೃತ್ಯುಂಜಯ ಮಟ್ಟಿ ಸ್ವಾಗತಿಸಿದರು. ಸುಧಾ ಕಬ್ಬೂರು, ಡಾ. ಗಂಗಯ್ಯ ಕುಲಕರ್ಣಿ, ಪದ್ಮಜಾ ಉಮರ್ಜಿ ಕಾರ್ಯಕ್ರಮ ನಿರ್ವಹಿಸಿದರು.

ಠರಾವ್ ಮಂಡನೆ: ರಾಜಕೀಯ ಬೇಳೆ ಬೇಯಿಸಿಕೊಳ್ಳುವಲ್ಲಿ ಸಾಹಿತ್ಯಲೋಕದ ದುರುಪಯೋಗ ಸಲ್ಲದು. ಅದು ಸದಾ ತನ್ನತನ ಉಳಿಸಿಕೊಳ್ಳಲು ಸಾಹಿತ್ಯಲೋಕ ಬದ್ಧವಾಗಬೇಕು ಎಂಬ ಠರಾವ್ ಅನ್ನು ಪರಿಷತ್ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಮಂಡಿಸಿದರು. ಸಭೆ ಒಮ್ಮತದಿಂದ ಅಂಗೀಕಾರ ನೀಡಿತು.