ಜಿಲ್ಲೆ

ಚಿಲ್ಕೂರು ಗ್ರಾಮದಲ್ಲಿ ಶಿಲಾ ಶಾಸನಗಳು ಪತ್ತೆ

ಹಾಸನ: ಬೇಲೂರು ತಾಲೂಕು ಹಗರೆ ಸಮೀಪದ ಚಿಲ್ಕೂರು ಗ್ರಾಮದಲ್ಲಿ ಬುಧವಾರ ಪ್ರಾಚೀನ ಶಿಲಾ ಶಾಸನಗಳು ಪತ್ತೆಯಾಗಿವೆ. ಹಾಸನದ ಇತಿಹಾಸ ತಜ್ಞರಾಗಿರುವ ಡಾ. ಎಂ.ಬಿ. ಇರ್ಷಾದ್ ಅವರು ಚಿಲ್ಕೂರು ಗ್ರಾಮಕ್ಕೆ ಪ್ರಾಚೀನ ಶಿಲಾಶಾಸನಗಳನ್ನು ಗಮನಿಸಿ ಅದರ ವಿವರಗಳನ್ನು ನೀಡಿದರು.
12ನೇ ಶತಮಾನದ ಮಹಾಸತಿಗಲ್ಲು ಹಾಗೂ ವೀರನಗಲ್ಲುಗಳು ಹೊಯ್ಸಳರ ಕಾಲದಲ್ಲೂ ಇತ್ತು. ಯೋಧರು ವೀರ ಮರಣ ಹೊಂದಿರುವುದಕ್ಕೆ ಮಹಾಸತಿಗಲ್ಲು ಸಾಕ್ಷಿ. ಇದಲ್ಲದೆ ಪ್ರತ್ಯೇಕವಾಗಿ ಇರುವ ಯೋಧನ ವೀರನಗಲ್ಲು ಹಾಗೂ ಹದಿನೆಂಟನೇ ಶತಮಾನದ ಶಾಸನವನ್ನು ಗುರುತಿಸಿದರು.
ಊರಲ್ಲಿರುವ ಪ್ರಾಚೀನ ದೇವಾಲಯದ ಕಲ್ಲುಗಳನ್ನು ಅವರು ಗಮನಿಸಿ ಈ ಹಿಂದೆ ಇಲ್ಲಿ ಪ್ರಾಚೀನ ದೇವಾಲಯ ಇತ್ತು ಎಂಬುದನ್ನು ಇದೆ ಸಾಕ್ಷಿ. ಚಿಲ್ಕೂರು ಗ್ರಾಮದಲ್ಲಿರುವ ಪ್ರಾಚೀನ ಮಠಕ್ಕೂ ಈ ಶಾಸನಗಳಿಗೂ ಸಂಬಂಧವಿದೆ ಎಂದು ಅವರು ತಿಳಿಸಿದರು.
ಶಾಸನಗಳ ಸುರಕ್ಷತೆ ದೃಷ್ಟಿಯಲ್ಲಿ ಚಿಲ್ಕೂರು ಮಠದ ಬಳಿ ಇರಿಸಲಾಗಿದೆ.
ಈ ಸಂದರ್ಭದಲ್ಲಿ ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಹಾಸನ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ವಿಜಯ್ ಅಂಗಡಿ, ಪ್ರಸಾರ ನಿರ್ವಾಹಕರಾದ ವಿ. ಮಧುಸೂದನ್, ಅಡಗೂರಿನ ಚೇತನ್ ಗುರೂಜಿ, ಗ್ರಾಮಸ್ಥರಾದ ಸಚಿನ್, ರವಿ, ನಂಜೇಶ್, ಮೋಹನ್, ಚಂದ್ರೇಗೌಡ, ಮತ್ತಿತರರು ಇದ್ದರು.