ಹುತ್ರಿದುರ್ಗ: ಕುಣಿಗಲ್ ತಾಲೂಕಿನ ಹೊಡಘಟ್ಟ ಗ್ರಾಮದ ಬಳಿ ಹುತ್ರಿದುರ್ಗ ಅರಣ್ಯ ಪ್ರದೇಶದ ಗಡಿ ಭಾಗದಲ್ಲಿ ಚಿರತೆಯನ್ನು ಗುಂಡಿಟ್ಟು ಸಾಯಿಸಿದ್ದು, ಈ ಕೃತ್ಯ ಎಸಗಿರು ಹೊಡೆಘಟ್ಟ ಗ್ರಾಮದ ಆರೋಪಿ ನಾರಾಯಣ ಎಂಬುವನನ್ನು ಬಂಧಿಸಿದ್ದಾರೆ. ರವಿಕುಮಾರ್, ಮೂರ್ತಿ ಎಂಬುವವರು ತಲೆ ಮರೆಸಿಕೊಂಡಿದ್ದಾರೆ.
ಸ್ಥಳಿಯರು ದೂರು ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡ ಮೃತಪಟ್ಟ 4 ವರ್ಷದ ಗಂಡು ಚಿರತೆಯ ಕಳೆಬರಹ ವಶಕ್ಕೆ ಪಡೆದು. ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.