ಗುಳೇದಗುಡ್ಡ : ಕಳೆದ ಐದಾರು ದಿನಗಳ ಹಿಂದೆ ಸಮೀಪದ ಪಟ್ಟದಕಲ್ಲು, ಕಾಟಾಪೂರ, ನಾಗಾರಳ ಎಸ್.ಪಿ. ಗ್ರಾಮಗಳ ಸುತ್ತಮುತ್ತ ಚಿರತೆಯೊಂದು ಓಡಾಡುತ್ತಿರುವುದರಿಂದ ಸಾರ್ವಜನಿಕರು ಆತಂಕ್ಕೆ ಒಳಗಾಗಿದ್ದು, ಅರಣ್ಯ ಇಲಾಖೆಯಿಂದ ಬೋನಿಗೆ ಚಿರತೆ ಸೆರೆಗೆ ಬೋನ್ ಇರಿಸಲಾಗಿದೆ.
ಅರಣ್ಯ ಇಲಾಖೆಯ ಬಾದಾಮಿ ಆರ್‌ಎ್ಒ ಮಹೇಶ ಮರೆಣ್ಣವರ ತಂಡವು ಚಿರತೆ ಹಿಡಿಯುವ ಸಲುವಾಗಿ ಕಾರ್ಯಪಡೆ ರಚನೆ ಮಾಡಿ ಬೋನ್ ಇರಿಸಿ ಹಗಲು, ರಾತ್ರಿ ಗಸ್ತು ತಿರುಗುತ್ತಿದ್ದಾರೆ.
ಚಿರತೆ ದಾಳಿಯಿಂದ ಆಕಳು ಕರು ಮೃತಪಟ್ಟಿದೆ. ಆ ಕರುವಿನ ಮಾಲೀಕರಿಗೆ ಪರಿಹಾರ ಕೊಡಿಸಲು ಕ್ರಮಕೈಗೊಂಡಿದ್ದು, ಚಿರತೆ ಹಿಡಿಯುವ ಸಲುವಾಗಿ ನಮ್ಮ ಸಿಬ್ಬಂದಿ ನಿತ್ಯವು ಗಸ್ತು ತಿರುಗುತ್ತಿದ್ದು, ಜನರು ಭಯಪಡಬಾರದು. ಜನರ ಕಣ್ಣಿಗೆ ಏನಾದರು ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ಕೊಡಿ ಎಂದು ವಲಯ ಅರಣ್ಯಾಧಿಕಾರಿ ಮಹೇಶ ಮರೆನ್ನವರ ಮನವಿ ತಿಳಿಸಿದ್ದಾರೆ.
ನಾಗಾರಳ ಎಸ್‌ಪಿ, ಕಾಟಾಪೂರ, ಮಂಗಳಗುಡ್ಡ ಭಾಗದಲ್ಲಿಯು ಚಿರತೆಯ ಸಂಚಾರ ಕಂಡು ಬಂದ ಬಗ್ಗೆ ಮಾಹಿತಿಯಿದೆ. ಕ್ಯಾಮರ್ ಟ್ರಾೃಪ್ ಅಳವಡಿಸಿ ಬೋನ್ ಸಹ ಇಡಲಾಗಿದೆ. ಜನರು ಆತಂಕಪಡುವುದು ಬೇಡ ಉಪವಲಯ ಅರಣ್ಯಾಧಿಕಾರಿ ಆರ್.ಎಸ್.ಹೊಸಮನಿ ತಿಳಿಸಿದ್ದಾರೆ.