ಚಿತ್ರದುರ್ಗ: ಹೊಳಲ್ಕೆರೆ ರಸ್ತೆಯ ಶ್ರೀಕೃಷ್ಣ ಯಾದವಾನಂದ ಗುರುಪೀಠ ಸಮೀಪದ ಬೆಟ್ಟದಲ್ಲಿ ಮಂಗಳವಾರ ಚಿರತೆ ಪ್ರತ್ಯಕ್ಷವಾಗಿದೆ. ದ್ವಿಚಕ್ರ ವಾಹನ ಸವಾರರು, ದಾರಿಹೋಕರು ಚಿರತೆ ನೋಡಲು ಮುಗಿಬಿದ್ದರು.
ದಿಢೀರ್ ಚಿರತೆ ಕಾಣಿಸಿಕೊಂಡ ಕಾರಣ ಸುತ್ತಮುತ್ತಲಿನ ನಾಗರಿಕರಲ್ಲೂ ಆತಂಕ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.