ಅರಕಲಗೂಡು ತಾಲೂಕಿನ ರಾಗಿಬೈಚನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಬಲಿಯಾದ ಎರಡು ಆಡುಗಳ ಕಳೇಬರ ವೀಕ್ಷಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ. 
ಜಿಲ್ಲೆ

ಚಿರತೆ ದಾಳಿಗೆ ಎರಡು ಮೇಕೆ ಬಲಿ

Hassan

ಅರಕಲಗೂಡು: ತಾಲೂಕಿನ ರಾಗಿಬೈಚನಹಳ್ಳಿ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎರಡು ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿವೆ.

ನೈಗೆರೆ ಸಮೀಪದ ರಾಗಿ ಬೈಚನಹಳ್ಳಿ ಮಂಜೇಗೌಡ ಎಂಬುವರು ಗರ್ಭ ಧರಿಸಿದ್ದ ಎರಡು ಮೇಕೆಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದರು. ಬುಧವಾರ ಮುಂಜಾನೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ಅರಣ್ಯ ಇಲಾಖೆ ಅಧಿಕಾರಿ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಚಿರತೆ ಸೆರೆಗೆ ಬೋನು ಇರಿಸುವುದಾಗಿ ಭರವಸೆ ನೀಡಿದ್ದಾರೆ.

ತಾಲೂಕಿನ ಕಸಬಾ ಹೋಬಳಿ ಸುತ್ತಮುತ್ತ ಕಳೆದ ಕೆಲ ತಿಂಗಳಿನಿಂದ ಜಾನುವಾರುಗಳನ್ನು ಬಲಿ ಪಡೆಯಿತ್ತಿರುವ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿರುವ ಬೋನಿಗೂ ಬೀಳುತ್ತಿಲ್ಲ. ಮರಿ ಹಾಕಿಕೊಂಡು ಹಳ್ಳಿಗಳಲ್ಲಿ ಆಹಾರಕ್ಕಾಗಿ ಅಲೆಯುತ್ತಿದ್ದು ಜೀವಭಯ ಉಂಟಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.