ರಾಯಚೂರು: ತಾಲೂಕಿನ ಶಕ್ತಿನಗರದಲ್ಲಿನ ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿನ ಚಿಮಣಿ ಮೇಲೆ ಸೋಮವಾರ ರಾಷ್ಟ್ರ ಧ್ವಜ ಏರಿಸಲು ಹೋಗಿ ಕಾರ್ಮಿಕನೊಬ್ಬ ಸಮಸ್ಯೆ ತಂದುಕೊಂಡಿದ್ದಾನೆ.
ಆರ್‌ಟಿಪಿಎಸ್‌ನ 7ನೇ ಯುನಿಟ್‌ನ ಸುಮಾರು 150 ಅಡಿ ಎತ್ತರದ ಚಿಮಣಿಯನ್ನು ಹತ್ತಿ ಕಾರ್ಮಿಕ ಸುನೀಲ್ ರಾಷ್ಟ್ರಧ್ವಜ ಹಾರಿದ್ದಾನೆ. ಚಿಮಣಿಯಿಂದ ಬಿಸಿ ಹಬೆ ಬರುತ್ತಿದ್ದರೂ ಕಷ್ಟಪಟ್ಟು ಸುನಿಲ್ ಮೇಲೆ ಏರಿ ರಾಷ್ಟ್ರಧ್ವಜ ಹಾರಿಸಿ ದೇಶಾಭಿಮಾನ ಮೆರೆಯಲು ಹೋಗಿದ್ದಾನೆ.
ಸ್ಥಳದಲ್ಲಿದ್ದ ಇತರ ಕಾರ್ಮಿಕರು ಮತ್ತು ಅಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ಸುನಿಲ್‌ನನ್ನು ಚಿಮಣಿಯಿಂದ ಕೆಳಗಿಳಿಸಿ ಠಾಣೆಗೆ ಕರೆದುಕೊಂಡು ಹೋಗಿ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟು ಕಳಿಸಿದ್ದಾರೆ.