ಜಿಲ್ಲೆ

ಚಿನ್ನಾಭರಣ ದೋಚಿದ ಖದೀಮರು

ಅಂಕೋಲಾ: ತಾಲೂಕಿನ ಬಾಸಗೋಡ ಕೋಗ್ರೆ ಗ್ರಾಮದಲ್ಲಿ ಶನಿವಾರ ರಾತ್ರಿ ಮನೆಯಲ್ಲಿ ಕಳ್ಳತನವಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಲಾಗಿದೆ. ಮಹಾಬಲೇಶ್ವರ ಸಣ್ಣಕೂಸ ಗೌಡ ಅವರ ಹೊಸ ಮನೆಯಲ್ಲಿ ಕಳವು ಮಾಡಲಾಗಿದೆ.

ಮನೆಯ ಮುಂಬಾಗಿಲಿನ ಕಬ್ಬಿಣದ ಗ್ರಿಲ್​ಗೆ ಹಾಕಿದ ಬೀಗವನ್ನು ಮುರಿದು, ಮನೆಯೊಳಗೆ ಪ್ರವೇಶಿಸಿದ ಕಳ್ಳರು ಬೆಡ್ ರೂಮ್ ಬಾಗಿಲಿನ ಲಾಕ್ ಕಟ್ ಮಾಡಿ, ಕಪಾಟಿನಲ್ಲಿದ್ದ 27 ಗ್ರಾಂ.ನ 1 ನೆಕ್ಲೆಸ್, 15 ಗ್ರಾಂನ 2 ಚೈನ್ , 10 ಗ್ರಾಂ.ನ 3 ಉಂಗುರ ಸೇರಿ ಒಟ್ಟು ಅಂದಾಜು 1 ಲಕ್ಷ 82 ಸಾವಿರ ರೂ. ಮೌಲ್ಯದ ಬಂಗಾರದ ಆಭರಣ ಕಳವು ಮಾಡಿರುವುದಾಗಿ ಮಹಾಬಲೇಶ್ವರ ಗೌಡ ದೂರು ನೀಡಿದ್ದಾರೆ. ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮಾರ್ಗದರ್ಶನದಲ್ಲಿ ಸಿಪಿಐ ಕೃಷ್ಣಾನಂದ ನಾಯಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.