ಪಟ್ಟನಾಯಕನಹಳ್ಳಿ: ಮನೆ ಕಳ್ಳತನ ಮಾಡಿ ಚಿನ್ನಾಭರಣ ದೋಚಿದ್ದ ಕಳ್ಳನನ್ನು ಪಟ್ಟನಾಯಕನಹಳ್ಳಿ ಪೊಲೀಸರು ಬಂಧಿಸಿ, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಪಾವಗಡ ತಾಲೂಕಿನ ಯರಪಾಳ್ಯ ಗ್ರಾಮದ ಶ್ರೀನಿವಾಸ್(30)ಬಂಧಿತ. ಶಿರಾ ತಾಲೂಕಿನ ಚಂಗಾವರ ಗ್ರಾಮದ ಸಿದ್ದಲಿಂಗಮ್ಮ ಎಂಬುವವರ ಮನೆಯಲ್ಲಿ ಹಾಡುಹಗಲೇ ಕಳ್ಳತನ ಮಾಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಎಸ್ಪಿ ಕೆ.ವಿ.ಅಶೋಕ್ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ವಿ.ಮರಿಯಪ್ಪ ಮತ್ತು ಬಿ.ಎಸ್.ಅಬ್ದುಲ್ ಖಾದರ್ ನೇತೃತ್ವದಲ್ಲಿ ಡಿವೈಎಸ್ಪಿ ಬಿ.ಕೆ.ಶೇಖರ್ ಸೂಚನೆ ಮೇರೆಗೆ ಶಿರಾ ಗ್ರಾಮಾಂತರ ವೃತ ನಿರೀಕ್ಷಕ ಕೆ.ಆರ್.ರಾಘವೇಂದ್ರ, ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಪಿಎಸ್ಐ ಎನ್.ಎಂ.ಭವಿತಾ, ಸುಹೇಲ್ ಅಹಮದ್, ಸಿಬ್ಬಂದಿ ಹನುಮಂತ ಚಾರ್, ಗುಂಡ ನಾಯ್ಕ, ಗಣೇಶ್, ಆರ್.ಶ್ರೀನಿವಾಸ್, ನಟರಾಜ ನಾಯಕ, ಜಗದೀಶ್, ಗೋಪಿನಾಥ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.