ಜಿಲ್ಲೆ

ಚಿನ್ನದ ಸರ ಕಸಿದಿದ್ದ ಕಳ್ಳನ ಬಂಧನ

ಎಂ.ಎನ್​.ಕೋಟೆ: ವೃದ್ಧೆಯನ್ನು ಹೆದರಿಸಿ 51 ಗ್ರಾಂ ತೂಕದ 4 ಚಿನ್ನದ ಸರ ಕಸಿದುಕೊಂಡು ತಲೆಮರೆಸಿಕೊಂಡಿದ್ದ ಕಳ್ಳನನ್ನು ಪ್ರಕರಣ ದಾಖಲಾದ 48 ಗಂಟೆಯಲ್ಲಿ ಗುಬ್ಬಿ ತಾಲೂಕಿನ ಚೇಳೂರು ಪೊಲೀಸರು ಬಂಧಿಸಿದ್ದಾರೆ.ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಮಾದೇನಹಳ್ಳಿ ಗ್ರಾಮದ ಮನೋಜ್​ (31) ಬಂಧಿತ. ಏ.11ರಂದು ಮಧ್ಯಾಹ್ನ ಹೊಸಕೆರೆ ಗ್ರಾಮದ ವೃದ್ಧೆ ರಾಜಲ್ಮ (75) ಅವರು ನಡೆದು ಹೋಗುತ್ತಿದ್ದಾಗ ಡ್ರಾಪ್​ ಕೊಡುವ ನೆಪದಲ್ಲಿ ಕರೆದೊಯ್ದು ಶಿವೇನಹಳ್ಳಿ ಕೆರೆ ಏರಿ ಸಮೀಪ ಹೆದರಿಸಿ ವೃದ್ಧೆ ಕೊರಳಿನಲ್ಲಿದ್ದ ಸರಗಳನ್ನು ಕಿತ್ತುಕೊಳ್ಳಲು ಯತ್ನಿಸಿದ್ದ. ವೃದ್ಧೆ ಪ್ರತಿರೋಧವೊಡ್ಡಿದ ಹಿನ್ನೆಲೆಯಲ್ಲಿ ತುಂಡಾದ 51 ಗ್ರಾಂ ತೂಕದ 4 ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿರಾ ಉಪ ವಿಭಾಗದ ಡಿವೈಎಸ್ಪಿ ಶೇಖರ್​ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗುಬ್ಬಿ ವೃತ್ತ ನಿರೀಕ ರಾವೇಂದ್ರ ಅವರ ನೇತೃತ್ವದಲ್ಲಿ ಚೇಳೂರು ಪಿಎಸ್​ಐ ನಾಗರಾಜು, ಸಿಬ್ಬಂದಿಗಳಾದ ರವಿಕುಮಾರ್​, ನಾಗಭೂಷಣ್​, ಪದ್ಮನಾಭ, ಮಧುಸೂದನ್​, ಚಾಲಕ ದೇವರಾಜಯ್ಯ ಅವರನ್ನೊಳಗೊಂಡ ತಂಡ 48 ಗಂಟೆಯಲ್ಲಿ ಕಳ್ಳನನ್ನು ಬಂಧಿಸಿ ಸರವನ್ನು ವಶಕ್ಕೆ ಪಡೆದಿದೆ.