ಸೋನಿಕಾ  
ಜಿಲ್ಲೆ

ಚಿನ್ನದ ಬೇಡಗಿ ಸೋನಿಕಾ

ಬಾಗಲಕೋಟೆ: ಇಲ್ಲಿನ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಪಿಎಚ್‌ಡಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳ.

ಸ್ನಾತಕೋತ್ತರ ವಿಭಾಗದ ಸೋನಿಕಾ ಎ.ಎಸ್. ನಾಲ್ಕು ಚಿನ್ನದ ಪದಕ ಪಡೆದು ಚಿನ್ನದ ಬೇಡಗಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುಡeಮರ್ಲಹಳ್ಳಿ ನಿವಾಸಿಯಾಗಿದ್ದು, ಪುಸ್ತಕ ಓದುವ ಹವ್ಯಾಸ ರೂಡಿಸಿಕೊಂಡಿದ್ದಾರೆ. ತಂದೆ ಶಿವಣ್ಣ ಕೃಷಿಕ, ತಾಯಿ ವೆಂಕಟಲಕ್ಷ್ಮಮ್ಮ ಗೃಹಿಣಿ. ನಾಲ್ಕು ಪದಕ ಪಡೆದು ವಿವಿಯಲ್ಲಿ ಸಾಧನೆ ಮಾಡಿದ್ದು, ತಂದೆ ಕೃಷಿಕರಾಗಿದ್ದು, ಅನ್ನದಾತರ ಸಮಸ್ಯೆ ಕಣ್ಣಾರೇ ಕಂಡಿದ್ದಾರೆ. ಹೀಗಾಗಿ ಕೃಷಿಯಲ್ಲಿನ ಸಮಸ್ಯೆಗಳಿಗೆ ಮುಕ್ತಿ ಹಾಡಬೇಕು. ನೀರಾವಳಿ, ಒಣ ಬೇಸಾಯಿ ಪದ್ಧತಿಯಲ್ಲಿ ನವೀನ ಮಾದರಿಯ ಕೃಷಿ ಪದ್ಧತಿ ಬರಬೇಕು. ಹಳೇ ಬೇರು, ಹೊಸ ಚಿಗುರು ಇರಬೇಕು ಎನ್ನುವುದು ಅವರ ಮನದ ಮಾತು.