ದಸರಾ ಕ್ರೀಡಾಕೂಟದಲ್ಲಿ ಪದಕ ಪಡೆದ ಬಾಗಲಕೋಟೆ ಜಿಲ್ಲೆಯ ಕ್ರೀಡಾಪಟುಗಳಾದ ಜ್ಯೋತಿಬಾ ಜಾಬ್ರೆ, ದರ್ಶನ ಅಡೇಕರ, ಆದರ್ಶ ತೋಟದಾರ, ಕಾರ್ತಿಕ ಪಡತಾರೆ.  
ಜಿಲ್ಲೆ

ಚಿನ್ನದ ಪದಕ ಬಾಚಿಕೊಂಡ ಕುಸ್ತಿ, ವುಶು ಕ್ರೀಡಾ ಪಟುಗಳು

ಬಾಗಲಕೋಟೆ: ಮೈಸೂರಿನ ಚಾಮುಂಡೇಶ್ವರಿ ಜಿಲ್ಲಾ ಕ್ರೀಡಾಂಗಣ ಅಕ್ಟೋಬರ ೩ ರಿಂದ ೬ ವರೆಗೆ ಜರುಗಿದ ರಾಜ್ಯ ಮಟ್ಟದ ಸಿಎಂ ದಸರಾ ಕ್ರೀಡಾಕೂಟಗಳಲ್ಲಿ ಬಾಗಲಕೋಟೆ ಜಿಲ್ಲೆಯ ಕುಸ್ತಿ, ವುಶು ಕ್ರೀಡಾಪಟುಗಳು ಚಿನ್ನದ ಪದಕ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

೭೦ ಕೆಜಿ ಕುಸ್ತಿಯಲ್ಲಿ ಜ್ಯೋತಿಬಾ ಜಾಂಬ್ರೆ, ೫೩ ಕೆಜಿ ಕುಸ್ತಿಯಲ್ಲಿ ಗೋಪವ್ವ ಕೊಡಕಿ, ೫೫ ಕೆಜಿ ಕುಸ್ತಿಯಲ್ಲಿ ಐಶ್ವರ್ಯ ಕರಿಗಾರ ಚಿನ್ನದ ಪದಕ ಪಡೆದರೆ, ೮೬ ಕೆಜಿ ಕುಸ್ತಿಯಲ್ಲಿ ದರ್ಶನ ಅಡೇಕರ ಬೆಳ್ಳಿಯ ಪದಕ, ೭೪ ಕೆಜಿ ಕುಸ್ತಿಯಲ್ಲಿ ಆದರ್ಶ ತೋಟದಾರ, ೬೧ ಕೆಜಿ ಕುಸ್ತಿಯಲ್ಲಿ ಕಾರ್ತಿಕ ಪಡತಾರೆ, ೫೫ ಕೆಜಿ ಕುಸ್ತಿಯಲ್ಲಿ ಬಾಳಿ ದಾಮನೇಕರ, ಹಣಮಂತ ತುಂಗಳ ಕಂಚಿನ ಪದಕ, ೭೭ ಕೆಜಿ ಕುಸ್ತಿಯಲ್ಲಿ ಕಾಡೇಶ ಪಾಟೀಲ, ೯೭ ಕೆಜಿ ಕುಸ್ತಿಯಲ್ಲಿ ಮಾರುತಿ ಶಿಂಧೆ, ಗಜಾನನ ಪಾಲಬಾವಿ, ಸೈಕ್ಲಿಂಗ್‌ನಲ್ಲಿ ಯಲಗೂರೇಶ ಗಡ್ಡಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಸೈಕ್ಲಿಂಗ್‌ನಲ್ಲಿ ಕೀರ್ತಿ ನಾಯಕ, ಪೂರ್ವಿ ಸಿದ್ದವಗೋಳ ಕಂಚಿನ ಪದಕ ಪಡೆದರೆ, ವುಶು ಕ್ರೀಡೆಯಲ್ಲಿ ನಿಂಗರಾಜ ರಾಜನಾಳ, ವಿನಾಯಕ ಗರಸಂಗಿ, ಮೇಘರಾಜ ಬಡಿಗೇರ, ಅಮೀತ ಆಡಿನ, ಮೌನೇಶ ಬಡಿಗೇರ, ಸುಮೀತ ಘೋರ್ಪಡೆ, ಸಂಜನಾ ಅಂಬೋರೆ, ಸುಹಾಸಿನಿ ರಜಪುತ, ಶಿವಾನಿ ನ್ಯಾಮಗೌಡರ, ಸವಿತಾ ಹುಬ್ಬಳ್ಳಿ, ನಿಖಿತಾ ಮೊಕಾಶಿ, ಯಾಸೀಕ ನಾಯಕ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ವುಶು ಕ್ರೀಡೆಯಲ್ಲಿ ರಾಽಕಾ ಪೂಜಾರಿ, ನಿರ್ಮಲಾ ರಾಠೋಡ, ಭಾಗ್ಯಶ್ರೀ ಜಾಧವ, ಸುದೀಪ ನಡಗಡ್ಡಿ, ಅಕ್ಷಯ ಮಠ, ಬಾಲಪ್ಪ ಪೂಜಾರಿ, ಸುಹಾಸಿನಿ ರಜಪುತ, ಆದ್ಯ ಗೌಡರ, ಭವಾನಿ ಪಡದಲಿ, ಭಗತ್ ನೆಟಕಟ್ಟಿ ಬೆಳ್ಳಿ ಪದಕ ಪಡೆದಿದ್ದಾರೆ. ಅರೋನ್ ಫರ್ನಾಂಡಿಸ್, ಸುಷ್ಮೀತಾ ಮುರಗೊಂಡ, ಜ್ಯೋತಿ ಘಾಟಗೆ ವುಶು ಕ್ರೀಡೆಯಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಪದಕ ಪಡೆದ ಕ್ರೀಡಾ ಪಟುಗಳಿಗೆ ಜಿಲ್ಲಾಽಕಾರಿ ಜಾನಕಿ ಕೆ.ಎಂ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಹರ್ಷ ವ್ಯಕ್ತಪಡಿಸಿದ್ದಾರೆ.

ಜ್ಯೋತಿಬಾ ಜಾಬ್ರೆ ೭೦ ಕೆಜಿ ಕುಸ್ತಿಯಲ್ಲಿ ಪ್ರಥಮ, ದರ್ಶನ ಅಡೇಕರ ೮೬ ಕೆಜಿಯಲ್ಲಿ ದ್ವಿತೀಯ, ಆದರ್ಶ ತೋಟದಾರ ೭೪ ಕೆಜಿಯಲ್ಲಿ ತೃತೀಯ ಸ್ಥಾನ, ಕಾರ್ತಿಕ ಪಡತಾರೆ ೫೭ ಕೆಜಿ ಕುಸ್ತಿಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.