ಕುವೆಂಪು ವಿವಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ ಬಾಳೆಹೊನ್ನೂರು ಸಮೀಪದ ಬೈರನಮಕ್ಕಿ ಗ್ರಾಮದ ವಸಂತಕುಮಾರ್ ಅವರನ್ನು ದೇವದಾನ ಗ್ರಾಪಂನಿಂದ ಸನ್ಮಾನಿಸಲಾಯಿತು. ಸಂಪತ್ ಮಾಗಲು, ಶೀಲಾವತಿ, ಶೇಷಪ್ಪ ಗೌಡ, ಮದನ್, ನಾಬರ್ಟ್ ಇತರರಿದ್ದರು. 
ಜಿಲ್ಲೆ

ಚಿನ್ನದ ಪದಕ ಪಡೆದ ವಿದ್ಯಾರ್ಥಿಗೆ ಗ್ರಾಪಂ ಸನ್ಮಾನ

ಬಾಳೆಹೊನ್ನೂರು: ಕುವೆಂಪು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿ ಬೈರನಮಕ್ಕಿ ಗ್ರಾಮದ ವಸಂತಕುಮಾರ್ ಅವರ ಸಾಧನೆ ಶ್ಲಾಘನೀಯ ಎಂದು ದೇವದಾನ ಗ್ರಾಪಂ ಅಧ್ಯಕ್ಷ ಸಂಪತ್ ಮಾಗಲು ಹೇಳಿದರು.

ದೇವದಾನ ಗ್ರಾಪಂನಿಂದ ವಸಂತಕುಮಾರ್ ಅವರನ್ನು ಗುರುವಾರ ಸನ್ಮಾನಿಸಿ ಮಾತನಾಡಿ, ಗ್ರಾಮೀಣ ಭಾಗದ ವಸಂತಕುಮಾರ್ ಎಂಎಯಲ್ಲಿ ಚಿನ್ನದ ಪದಕ, ನಗದು ಬಹುಮಾನ ಪಡೆದಿರುವುದು ಅಸಾಧಾರಣ ಸಾಧನೆ. ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡಿ ಇಂಥ ಸಾಧನೆ ಮಾಡಿರುವುದು ಅವರ ಪ್ರತಿಭೆಗೆ ದೊರೆತ ಫಲ ಎಂದರು. ಗ್ರಾಪಂ ಉಪಾಧ್ಯಕ್ಷೆ ಶೀಲಾವತಿ, ಸದಸ್ಯರಾದ ಶೇಷಪ್ಪ ಗೌಡ, ಮದನ್ ಹುಣಸೇಹಳ್ಳಿ, ನಾಬರ್ಟ್ ಪಿಂಟೋ ಇತರರಿದ್ದರು.