ಜಿಲ್ಲೆ

ಚಿನ್ನ ಉಳಿತಾಯ ಯೋಜನೆ

ಚಿತ್ರದುರ್ಗ: ಕಂಠೇಶ್ವರ ನಿಧಿಯಡಿ ಚಿನ್ನ ಉಳಿತಾಯ ಯೋಜನೆಯನ್ನು ನೂತನವಾಗಿ ಬುಧವಾರ ಉದ್ಘಾಟನೆಗೊಂಡ ನಗರದ ಲಕ್ಷ್ಮಿಬಜಾರ್ ರಸ್ತೆಯ ಶ್ರೀಕಂಠೇಶ್ವರ ಜ್ಯುವೆಲರ್ಸ್‌ ರೂಪಿಸಿದೆ.

ಈ ಯೋಜನೆಯಲ್ಲಿ 10 ತಿಂಗಳು ಗ್ರಾಹಕರು ಪಾವತಿಸುವ ಮೊತ್ತಕ್ಕೆ 1 ತಿಂಗಳ ಬೋನಸ್ ಕೊಡಲಾಗುವುದು. ಆಸಕ್ತರು ಹೆಸರು ನೋಂದಾಯಿಸಿಕೊಂಡು ಕಾರ್ಡ್ ಪಡೆಯಬಹುದು.

ಸದಸ್ಯತ್ವ ಪಡೆದ ಗ್ರಾಹಕರು ಮಾಸಿಕ ಕಂತಿನ ಹಣವನ್ನು 10ನೇ ತಾರೀಖಿನೊಳಗೆ ಪಾವತಿಸಬೇಕು. ತಡವಾದಲ್ಲಿ ಅವರಿಗೆ ಬೋನಸ್ ಹಣ ನೀಡಲಾಗುವುದಿಲ್ಲ. ಒಮ್ಮೆ ಹೆಸರು ನೋಂದಾಯಿಸಿಕೊಂಡಲ್ಲಿ ಅದನ್ನು ವರ್ಗಾಯಿಸುವಂತಿಲ್ಲ, ಅರ್ಧದಲ್ಲಿ ನಿಲ್ಲಿಸಿದಲ್ಲಿ ಹಣ ಮರುಪಾವತಿ ಮಾಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಜ್ಯುವೆಲರ್ಸ್‌ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.