Innerwheel Club provides facilities to Chinagundi School 
ಜಿಲ್ಲೆ

ಚಿನಗುಂಡಿ ಶಾಲೆಗೆ ಇನ್ನರ್‌ವೀಲ್ ಕ್ಲಬ್‌ನಿಂದ ಸೌಲಭ್ಯ

ಜಮಖಂಡಿ : ತಾಲೂಕಿನ ಚಿನಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಇನ್ನರ್‌ವೀಲ್ ಕ್ಲಬ್‌ನಿಂದ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದು ಕ್ಲಬ್ಬಿನ ಪದಾಧಿಕಾರಿಗಳು ಭರವಸೆ ನೀಡಿದರು.

ತಾಲೂಕಿನ ಚಿನಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದು ಟಿವಿ, 4 ್ಯಾನ್ ಕ್ಲಬ್ ವತಿಯಿಂದ ವಿತರಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರ್ ಕಾಂಬಳೆ ಅಧ್ಯಕ್ಷತೆವಹಿಸಿ ಮಾತನಾಡಿ, ಶಾಲೆಗೆ ಗ್ರಂಥಾಲಯ ನಿರ್ಮಿಸಲು ಪ್ರಯತ್ನ ಮಾಡಲಾಗುವುದು ಎಂದರು.

ಬೆಂಗಳೂರು ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಚಂದ್ರಿಕಾ ಮಾತನಾಡಿ, ಶಾಲೆಗೆ ಮತ್ತಷ್ಟು ಸೌಲಭ್ಯ ನೀಡಲಾಗುವುದು ಎಂದರು. ವಸುಧಾ, ರಿಶಿಕ, ಮುಖ್ಯಶಿಕ್ಷಕ ಜಿ.ಎನ್. ಕುಂಬಾರ ಮಾತನಾಡಿದರು. ಪರಮಾನಂದ ಸ್ವಾಗತಿಸಿದರು, ಆ.ಎ. ಅಮರಿ ನಿರೂಪಿಸಿದರು, ಸಿದ್ಧಗಂಗು ವಂದಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಚಿಕ್ಕಯ್ಯ ಕಾಂಬಳೆ, ಗ್ರಾಪಂ ಸದಸ್ಯ ರಾಮಣ್ಣ ಕಳ್ಯಾಡ್ರ ರಮೇಶ ಕಾಂಬಳೆ, ರಾಮಪ್ಪ ಗುರವ, ಶ್ರೀಶೈಲ್ ಮಠಪತಿ, ಅಲ್ಲಾಸಾಬ್ ಪಿಂಜಾರ ಇತರರು ಇದ್ದರು.