ಜಿಲ್ಲೆ

ಚಿದಾನಂದ ಹಾರೂಗೇರಿಗೆ ಪಿಎಚ್.ಡಿ ಪದವಿ

ಚಿದಾನಂದ ಹಾರೂಗೇರಿಗೆ ಪಿಎಚ್.ಡಿ ಪದವಿ

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಪರಾಧ ಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗದ ಸಂಶೋಧನಾ ವಿದ್ಯಾರ್ಥಿ ಚಿದಾನಂದ ಹಾರೂಗೇರಿ ಅವರಿಗೆ ಆರ್‌ಸಿಯು ಪಿಎಚ್.ಡಿ ಪದವಿ ನೀಡಿದೆ.

ಚಿದಾನಂದ ಹಾರೂಗೇರಿ ಎ ಸ್ಟಡಿ ಆಫ್ ಕ್ರಿಮಿನಲ್ ಆ್ಯಂಡ್ ಸೋಶಿಯಲ್ ಬಿಹೇವಿಯರ್ ಆಫ್ ಹ್ಯಾಬಿಚುವಲ್ ಆಫೆಂಡರ್ಸ್ ಇನ್ ನಾರ್ಥ ಕರ್ನಾಟಕ ಎಂಬ ವಿಷಯದ ಕುರಿತಾಗಿ ಮಹಾಪ್ರಬಂಧ ಆ‌ರ್ ಸಿಯುಗೆ ಸಲ್ಲಿಸಿ, ಸಂಶೋಧನಾ ವಿಷಯವನ್ನು ಮಂಡಿಸಿದ್ದರು. ಆರ್‌ಸಿಯು ಅಪರಾಧ ಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮಹೇಶ್ವರಿ ಕಾಚಾಪುರ ಮಾರ್ಗದರ್ಶಕರಾಗಿದ್ದರು.